ಬಿಜೆಪಿ ಸಹಕಾರ ಪ್ರಕೋಷ್ಠಗಳ ಸಭೆ


ಲಕ್ಷ್ಮೇಶ್ವರ,ಮಾ.17:ಪಟ್ಟಣದ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಶಿರಹಟ್ಟಿ ಮಂಡಲದ ಭಾರತೀಯ ಜನತಾಪಕ್ಷದ ಸಹಕಾರ ಪ್ರಕೋಷ್ಠಗಳ ಸಭೆ ಜರುಗಿತು.
ಸಭೆಯನ್ನು ಶಾಸಕ ಡಾಕ್ಟರ್ ಚಂದ್ರು ಲಮಾಣಿ ಅವರು ಉದ್ಘಾಟಿಸಿ ಸಹಕಾರದ ಕುರಿತು ಮಾತನಾಡಿದರು
ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಧಾನ ಪರಿಷತ್ತಿನ ಸದಸ್ಯರಾದ ಎಸ್ ವಿ ಸಂಕನೂರ ಮತ್ತು ಎಸ್ ಕೆ ನವೀನ್ ಅವರು ಸಹಕಾರ ಪ್ರಕೋಷ್ಠಗಳ ಮೂಲ ಉದ್ದೇಶ ಮತ್ತು ಮಹತ್ವತೆಯ ಕುರಿತು ಮಾತನಾಡಿ ಸಹಕಾರ ಕ್ಷೇತ್ರಕ್ಕೆ ಗದಗ ಜಿಲ್ಲೆಯ ಕೊಡುಗೆ ಅಪಾರವಾಗಿದ್ದು ಸಹಕಾರ ಕ್ಷೇತ್ರದ ಬಲವರ್ಧನೆಯಿಂದ ಗ್ರಾಮೀಣ ಪ್ರದೇಶದ ಜನರ ಬದುಕು ಹಸನವಾಗುತ್ತದೆ ಈ ನಿಟ್ಟಿನಲ್ಲಿ ಸಹಕಾರ ಪ್ರಕೋಷ್ಠಗಳ ಪದಾಧಿಕಾರಿಗಳು ಹೆಚ್ಚು ಒತ್ತು ನೀಡಿ ಜನರೊಂದಿಗೆ ಬೆರೆಯುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿರಹಟ್ಟಿ ಮಂಡಲದ ಬಿಜೆಪಿ ಅಧ್ಯಕ್ಷರಾದ ಮಹಾಂತ ಶೆಟ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಫಕೀರೇಶ ರಟ್ಟಿಹಳ್ಳಿ ಗದಗ ಜಿಲ್ಲಾ ಪ್ರಕೋಷ್ಟದ ಸಂಚಾಲಕ ಶಶಿಧರ ದಿಂಡೂರ ಬಸವರಾಜ ಪಲ್ಲೇದ ನಾಗರಾಜ್ ಕುಲಕರ್ಣಿ ಪ್ರವೀಣ್ ಬಾಳಿಕಾಯಿ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿ ಅಂಕಲ ಕೋಟಿ ಮಂಡಲ್ ಪ್ರಧಾನ ಕಾರ್ಯದರ್ಶಿ, ಅನಿಲ್ ಮುಳುಗುಂದ್, ಗಂಗಾಧರ ಮೆಣಸಿನಕಾಯಿ ಪ್ರವೀಣ್ ಪಾಟೀಲ್ ವಿಶಾಲ ಬಟಗುರ್ಕಿ ವಿಜಯ ಕುಂಬಾರ ಅಶೋಕ ಪಲ್ಲೇದ ಜಾನು ಲಮಾಣಿ ಸುಭಾಷ್ ಬಟಗುರ್ಕಿ ತಿಮ್ಮರೆಡ್ಡಿ ಮ ರೆಡ್ಡಿ ದುಂಡೇಶ ಕೊಟ್ಟಗಿ ನವೀನ್ ಬೆಳ್ಳಟ್ಟಿ ಸೇರಿದಂತೆ ಪುರಸಭೆಯ ಬಿಜೆಪಿ ಸದಸ್ಯರು ಪಾಲ್ಗೊಂಡಿದ್ದರು.