ಬಿಜೆಪಿ ಸರ್ಕಾರ ಸುಳ್ಳಿನ ಸರ್ಕಾರ:ಲಾಡ್

ಸಂಜೆ ವಾಣಿ ವಾರ್ತೆ
ಕೊಟ್ಟೂರು ಅ 05: ಸರ್ಕಾರದ ಮೇಲೆ ಇದ್ದ ಭರವಸೆ ಮಣ್ಣುಪಾಲಾಗಿದ್ದು, ಬರೀ ಸುಳ್ಳಿನ ಸೌಧ ನಿರ್ಮಿಸಿದ್ದಾರೆ. ಚುನಾವಣೆ ಪೂರ್ವದಿಂದ ಹಿಡಿದು ಇಲ್ಲಿಯವರೆಗೆ ಸುಳ್ಳು ಹೇಳುತ್ತಲೇ ಬಂದಿದ್ದಾರೆ ಎಂದು ಮಾಜಿ ಸಚಿವ ಸಂತೋಷ್‌ ಲಾಡ್‌ ಕಿಡಿಕಾರಿದ್ದಾರೆ. ಪಟ್ಟಣದ ಕಾಂಗ್ರೆಸ್ ಮುಖಂಡ ಎಂಎಂ ಜೆಹರ್ಷವರ್ಧನ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಸಹ ಈಗ ಜಾಗೃತರಾಗುತ್ತಿದ್ದಾರೆ. ಇನ್ನಷ್ಟು ಜಾಗೃತರಾಗಬೇಕಾದ ಅಗತ್ಯ ಇದೆ. ರಾಜಕೀಯ ಪಕ್ಷವಾಗಿ ಇರಲಿಕ್ಕೂ ಬಿಜೆಪಿ ನೈತಿಕತೆ ಕಳೆದುಕೊಂಡಿದೆ ಎಂದರು.ಮುಂಬರುವ 2023ರ ವಿಧಾನಸಭಾ ಚುನಾವಣೆ ಕಲ್ಲಘಗಿ ಕ್ಷೇತ್ರದಿಂದಲೇ ಸ್ಪರ್ಧಿಸುವ ಎಂದರು.ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಂಎಂ ಜೆಹರ್ಷವರ್ಧನ, ಪಿ‌.ಸುಧಕರಗೌಡ ಪಾಟೇಲ್, ಬೂದಿ ಶಿವಕುಮಾರ್, ದ್ವಾರಕೀಶ್, ಅಟವಾಳ್ಗಿಸಂತೋಷ ಕುಮಾರ್ ಸೇರಿದಂತೆ ಅನೇಕ ರಿದ್ದರು.