ಬಿಜೆಪಿ ಸರ್ಕಾರ ಸದಾಶಿವ ವರದಿ ತಿರಸ್ಕರಿಸಿ ಬಲಗೈ ಜಾತಿಗಳಿಗೆ ಅನ್ಯಾಯ

ರಾಯಚೂರು,ಏ.೧- ರಾಜ್ಯ ಬಿಜೆಪಿ ಸರ್ಕಾರ ಎ.ಜೆ. ಸದಾಶಿವ ಆಯೋಗ ವರದಿಯನ್ನು ತಿರಸ್ಕರಿಸಿ ಸಚಿವ ಸಂಪುಟದ ಉಪಸಮಿತಿ ಎ.ಮಾಧುಸ್ವಾಮಿ ನೇತೃತ್ವದ ಉಪಸಮಿತಿ ವರದಿ ಅಂಗೀಕಾರ ಮಾಡಿ ಬಲಗೈ ಸಮಾನಾಂತರ ಜಾತಿಗಳಿಗೆ ಅನ್ಯಾಯ ಮಾಡಿರುವುದು ಖಂಡನೀಯ ಎಂದು ಛಲವಾದಿ ಸಂಘಟನೆಗಳ ಒಕ್ಕೂಟ ಮುಖಂಡ ರವೀಂದ್ರನಾಥ ಪಟ್ಟಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಸರ್ಕಾರ ಬಲಗೈ ಸಂಬಂಧಿಸಿದ ಜಾತಿಗಳನ್ನು ಗ್ರೂಪ್ ಬಿ – ೨ ಪಟ್ಟಿಯಲ್ಲಿ ಸೇರಿಸಬೇಕು.ನ್ಯಾಯಮೂರ್ತಿ ಸದಾಶಿವ
ರವರು ತಮ್ಮ ವರದಿಯಲ್ಲಿ ಮಾದಿಗ ಸಂಬಂಧಿಸಿದ ಜಾತಿಗಳಾದ ೫೦ ಇದ್ದು, ಅವು ಗಳಿಗೆ ಶೇ.೬ ರಷ್ಟು ಮೀಸಲಾತಿ ನೀಡಬೇಕು. ಹೊಲೆಯ ಸಂಬಂಧಿಸಿದ ಜಾತಿಗಳಾದ ೨೯ ಗಳಿಗೆ ಶೇ. ೫ ರಷ್ಟು ಮೀಸ ಲಾತಿ ನೀಡಬೇಕು. ಲಮಾಣಿ, ಭೋವಿ, ಕೊರವ, ಕೊರಚ ಈ ಜಾತಿಗಳಿಗೆ ಶೇ. ೩ ರಷ್ಟು ಮೀಸಲಾತಿ ನೀಡಬೇಕು. ಅಸ್ಪೃಶ್ಯ ಅಲೆಮಾರಿ ಜಾತಿಗಳಿಗೆ ಶೇ.೧ ರಷ್ಟು ಮೀಸಲಾತಿಯನ್ನು
ನೀಡಬೇಕೆಂದು ವರದಿ ನೀಡಿದೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸದಾಶಿವ ವರದಿಯನ್ನು ಜಾರಿ ಮಾಡದೇ ತಮ್ಮ ಸಚಿವ ಸಂಪುಟದ ಉಪಸಮಿತಿಯನ್ನು ರಚಿಸಿತು. ಸಚಿವ ಸಂಪುಟದಲ್ಲಿ ಜಾತಿಗಳ ಬಗ್ಗೆ ನಿಖರವಾದ ಮಾಹಿತಿ ಇಲ್ಲದ ಅದರಲ್ಲಿ ಜ್ಞಾನವಿಲ್ಲದ ಸಚಿವರನ್ನು ಉಪಸಮಿತಿಯಲ್ಲಿ ನೇಮಿಸಿದ್ದಾರೆ.ಇದರಲ್ಲಿ ಜೆ.ಸಿ. ಮಾಧುಸ್ವಾಮಿ ಲಿಂಗಾಯತ, ಗೋವಿಂದ ಎಂ. ಕಾರಜೋಳ ಮಾದಿಗ, ಎಸ್. ಅಂಗಾರ ಇವರ ಜಾತಿ ಗೊತ್ತಿಲ್ಲ,ಪ್ರಭು ಚವ್ಹಾಣ ಲಮಾಣಿ,ಡಾ.ಕೆ.ಸುಧಾಕರ ಒಕ್ಕಲಿಗ,ಇವರ ನೇತೃತ್ವದಲ್ಲಿ ಸಮಿತಿ ರಚಿಸಿ,೩ ಸಲ ತಮ್ಮ ಸಮಿತಿಯಲ್ಲಿ ಚರ್ಚಿಸಿದರು. ಇವರಲ್ಲಿ ಇಬ್ಬರು ಜಾತಿಗಳ ಬಗ್ಗೆ ಪರಿಜ್ಞಾನ ಇಲ್ಲದವರು ಹಾಗೂ ಮೇಲ್ವಾತಿಗೆ ಸೇರಿದವರಾಗಿದ್ದಾರೆ. ಸದಾಶಿವ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಿ ತಮ್ಮದೇ ಆದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ ಎಂದರು.
ಬಿಜೆಪಿ ಸರ್ಕಾರ ಚುನಾವಣೆ ದೃಷ್ಟಿಯಿಂದ ಅಸ್ಪೃಶ್ಯ ಬಲವೇ ಸಂಬಂದಿಸಿದ ಜನಾಂಗಕ್ಕೆ ಮೋಸ ಮಾಡುವ ನಾರದಿಂದ ಈ ವರದಿಯನ್ನು ತರಾತುರಿಯಾಗಿ ಚುನಾವಣೆ ದೃಷ್ಟಿಯಿಂದ ನೀತಿ ಸಂಹಿತ ಜಾರಿ ಆಗುವ ಒಂದು ದಿನ ಮುಂಚೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸದೆ. ಕೂಡಲೇ ಈ ತಾರತಮ್ಮ ಸರಿಪಡಿಸಿ ಕೇಂದ್ರ ಸರ್ಕಾರಕ್ಕೆ ಸದರು ಜಾತಿಗಳನ್ನು ಗ್ರೂಪ್ ಬಿ ೨ಗೆ ಸೇರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಗನ್ನಾಥ ಸಂಕಾರಿ, ಆರ್. ರವಿಕುಮಾರ, ನೆಲಹಾಳ ನರಸಿಂಹಲು,ಆರ್.ತಿಮ್ಮಾರೆಡ್ಡಿ, ಯಲ್ಲಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.