ಜೈಪುರ,ಜು.9- ಕೇಂದ್ರದಿಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಕಿತ್ತೊಗೆಯುವ ತನಕ ಕಾಂಗ್ರೆಸ್ ಹೋರಾಟ ಮುಂದುವರಿಯಲಿದೆ ಎಂದು ರಾಜಸ್ತಾನದ ವಿಪತ್ತು ಪರಿಹಾರ ಸಚಿವ ಗೋವಿಂದ್ ಮೇಘವಾಲ್ ಹೇಳಿದ್ದಾರೆ.
ಮೋದಿ ಸರ್ಕಾರ ಕಿತ್ತೊಗೆಯಲು ಕಾಂಗ್ರೆಸ್ ಕಾರ್ಯಕರ್ತರು ಕಾನೂನು ತೆಗೆದುಕೊಳ್ಳಬಹುದು ಗುಡುಗಿದ್ದಾರೆ.
ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ತಡೆ ಕೋರಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ತಿರಸ್ಕರಿಸಿದ ಬಳಿಕ ಈ ಹೇಳಿಕೆ ನೀಡಿದ್ದಾರೆ .
ಬಿಜೆಪಿ ಎಲ್ಲ ಮಿತಿಗಳನ್ನು ಮೀರಿದೆ.. ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವ ತನಕ ಕಾಂಗ್ರೆಸ್ ಕಾರ್ಯಕರ್ತರು ಸುಮ್ಮನಿರುವುದಿಲ್ಲ ಎಂದಿದ್ದಾರೆ.
ಕಾನೂನನ್ನು ಕೈಗೆ ತೆಗೆದುಕೊಂಡಾದರೂ ಸರಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್ ಕಾರ್ಯಕರ್ತರು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ..
“ಜಗತ್ತಿನಲ್ಲಿ ಅತಿ ಹೆಚ್ಚು ಸುಳ್ಳು ಹೇಳುವ ಪ್ರಧಾನಿ ಯಾರಾದರೂ ಇದ್ದರೆ ಅದು ನರೇಂದ್ರ ಮೋದಿ ಎಂದು ವಾಗ್ದಾಳಿ ನಡೆಸಿದ ಅವರು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ ಅವರು ಅಂಬಾನಿ-ಅದಾನಿ ಮತ್ತು ಆರ್‌ಎಸ್‌ಎಸ್ ಗಳ ಪ್ರಧಾನಿ ದೇಶಕ್ಕಲ್ಲ ಎಂದಿದ್ದಾರೆ.
ದೇಶವನ್ನು ವಿಭಜಿಸುವ ಅನಕ್ಷರಸ್ಥ ಪ್ರಧಾನಿ, ”ಎಂದು ದೂರಿದ ಅವರು ” ಪ್ರಜಾಪ್ರಭುತ್ವ ನಾಶ ಮಾಡಿದ್ದಾರೆ. ಸಂವಿಧಾನ ಉಲ್ಲಂಘಿಸುತ್ತಿದ್ದೀರಿ. ದೇಶಕ್ಕೆ ಕಳಂಕ ಎಂದು ಸಾಬೀತುಪಡಿಸಿದ್ದೀರಿ … ದೇಶದ ಪ್ರಧಾನಿಗೆ ಜಗತ್ತಿನಲ್ಲಿ ಹೆಸರು ಮತ್ತು ಖ್ಯಾತಿ ಇತ್ತು, ಆದರೆ ನೀವು ಅದನ್ನು ಹಿಂದೂ ಎಂದು ವಿಂಗಡಿಸಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.