ಬಿಜೆಪಿ ಸರ್ಕಾರದ ಸುಭದ್ರ ಆಡಳಿತಕ್ಕೆ ಸಿಕ್ಕ ಗೆಲವು

ಲಕ್ಷ್ಮೇಶ್ವರ, ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಶಿರಾ ಮತ್ತು ಆರ್‍ಆರ್ ನಗರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರಿಂದ ಬಿಜೆಪಿ ಕಾರ್ಯಕರ್ತರು ಬುಧವಾರ ಪಟ್ಟಣದ ಸೋಮೇಶ್ವರ ದೇವಸ್ಥಾನಕ್ಕೆ ತೆರಳಿ ದೇವರಿಗೆ ಅಭಿಷೇಕ ಮಾಡಿ ಸಿಹಿ ಹಂಚಿ ಸಂಭ್ರಮೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚೆಂಬಣ್ಣ ಬಾಳಿಕಾಯಿ ಅವರು ಮಾತನಾಡಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಜನಪರ ಯೋಜನೆಗಳಿಗೆ ಮಾರು ಹೋಗಿ ಜನರು ಮತದಾನ ಮಾಡಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಳಿತಕ್ಕೆ ಸಿಕ್ಕ ಗೆಲುವಾಗಿದೆ. ಪಶ್ಚಿಮ ಪದವಿಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರೋ,ಎಸ್.ವಿ.ಸಂಕನೂರ ಅವರು ಸಹ ಗೆಲುವು ಸಾಧಿಸಿರುವುದು ನಮ್ಮೆಲ್ಲ ಕಾರ್ಯಕರ್ತರ ಗೆಲುವಾಗಿದೆ ಎಂದು ಹೇಳಿದರು. ಎಂ.ಆರ್.ಪಾಟೀಲ, ಪೂರ್ಣಾಜಿ ಕರಾಟೆ, ದುಂಡೇಶ ಕೊಟಗಿ, ಗಂಗಾಧರ ಮೆಣಸಿನಕಾಯಿ ಮಾತನಾಡಿದರು.
ವಿಜಯೋತ್ಸವದಲ್ಲಿ ನೀಲಪ್ಪ ಕರ್ಜಕಣ್ಣವರ, ರಾಮಣ್ಣ ರಿತ್ತಿ, ಅಶೋಕ ಬಟಗುರ್ಕಿ, ಪ್ರಕಾಶ ಮಾದನೂರ, ಚಂದ್ರು ಹಂಪಣ್ಣವರ, ರಮೇಶ ಹಾಳದೋಟದ, ಉಳವೇಶ ಪಾಟೀಲ, ಅರುಣ ಪಾಟೀಲ, ಶಕ್ತಿ ಕತ್ತಿ, ಬಸವರಾಜ ಕಲ್ಲೂರ, ಅಶೋಕ ನೀರಾಲೋಟಿ, ಸಂಗಮೇಶ ಬೆಳವಲಕೊಪ್ಪ, ರಾಜಶೇಖರ ಶಿರಹಟ್ಟಿ, ಚಾಯಪ್ಪ ಬಸಾಪೂರ, ಶ್ರೀಕಾಂತ ಪಾಟೀಲ, ಈರಣ್ಣ ಗಾಣಿಗೇರ, ಗಿರೀಶ ಚೌರೆಡ್ಡಿ, ಬಸವರಾಜ ಚಕ್ರಸಾಲಿ, ಸಬವರಾಜ ಮೆಣಸಿನಕಾಯಿ, ನಾಗರಾಜ ಕುಲಕರ್ಣಿ, ಶ್ರೀಕಾಂತ ಪೂಜಾರ್ ಮೊದಲಾದವರು ಇದ್ದರು.