ಬಿಜೆಪಿ ಸರ್ಕಾರದ ಬಗ್ಗೆ ಪುಷ್ಪ ಅಮರನಾಥ್ ವ್ಯಂಗ್ಯ

ಕೋಲಾರ,ಮಾ,೧೧-ಮುಂಬರಲಿರುವ ಕೋಲಾರ ವಿಧಾನ ಸಭಾ ಚುನಾವಣೆಗೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಸ್ವರ್ಧಿಸುತ್ತಿದ್ದು, ಇದೇ ಮಾ೨೧ ಮತ್ತು ೨೨ ರಂದು ಕೋಲಾರ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ಸಿ.ಪಿ.ಎಲ್ ನಾಯಕರೊಂದಿಗೆ ಕೆ.ಪಿ.ಸಿ.ಸಿ.ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ಉಸ್ತುವಾರಿ ಹಾಗೂ ಎ.ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಸುರ್ಜಿರವಾಲಸಿಂಗ್ ಅವರು ಸಹ ಭಾಗವಹಿಸದ್ದಾರೆ ಎಂದು ರಾಜ್ಯ ಮಹಿಳಾ ಕಾಂಗ್ರೇಸ್ ಅಧ್ಯಕ್ಷ ಪುಷ್ಪ ಅಮರನಾಥ್ ತಿಳಿಸಿದರು,
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿನ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡುತ್ತಾ ಚುನಾವಣಾ ಪ್ರಚಾರದಲ್ಲಿ ಮೂರು ಪ್ರಮುಖ ಭರವಸೆಗಳ ಗ್ಯಾರೆಂಟಿ ಕಾರ್ಡ್‌ನ್ನು ಮನೆ,ಮನೆಗೆ ತಲುಪಿಸುವ ಕಾರ್ಯಕ್ರಮದ ಬಗ್ಗೆ ಪ್ರಚಾರ ಮಾಡಲಿದ್ದಾರೆ. ನಮ್ಮದು ನುಡಿದಂತೆ ನಡೆವ ಸರ್ಕಾರ ಎಂದು ಈ ಹಿಂದೆ ಸಿದ್ದರಾಮಯ್ಯನವರ ಆಡಳಿತದಲ್ಲಿ ಸಾಭೀತು ಪಡೆಸಿದೆ ಎಂದು ಹೆಮ್ಮೆಯಿಂದ ನುಡಿದರು,
ದೇಶದಲ್ಲಿ ಶೇ ೫೦ ಕ್ಕಿಂತ ಮಹಿಳಾ ಮತದಾರರು ಇದ್ದಾರೆ. ಮಹಿಳೆರನ್ನು ಅರ್ಥಿಕವಾಗಿ ಸಬಲೀಕರಣಕ್ಕೆ ಪೂರಕವಾಗಿ ಕುಟುಂಬದ ಯಾಜಮಾನಿಗೆ ಪ್ರತಿ ಮಾಹೆ ೨ ಸಾವಿರ ರೂ ನೆರವು ನೀಡುವ ಗ್ಯಾರೆಂಟ್ ಕಾರ್ಡ್‌ನ್ನು ನೀಡಲು ಬೂತ್ ಸಮಿತಿಗಳ ಸಭೆಯನ್ನು ಮಾಡಲಾಗುವುದು. ಇದರೊಂದಿಗೆ ಪ್ರತಿಯೊಬ್ಬರಿಗೆ ೧೦ ಕೆ.ಜಿ. ಹಾಗೂ ಪ್ರತಿ ಮನೆಗೆ ೨೦೦ ಯೂನಿಟ್ ವಿದ್ಯುತ್ ನೀಡಲಾಗುವುದು ಎಂದು ವಿವರಿಸಿದರು,
ಅದರೆ ಬಿಜೆಪಿ ಸರ್ಕಾರವು ಈ ಹಿಂದೆ ನೀಡಿದ್ದ ಎಲ್ಲಾ ಭರವಸೆಗಳನ್ನು ವಿಫಲಗೊಳಿಸಿದೆ. ಶೇ ೪೦ರಷ್ಟು ಕಮೀಷನ್ ಕಡ್ಡಾಯ ಮಾಡಿರುವುದರಿಂದ ಬಿಜೆಪಿ ಸರ್ಕಾರಕ್ಕೆ ಆಸ್ಕರ್ ಅಥಾವ ನೋಬಲ್ ಪ್ರಶಸ್ತಿ ನೀಡಬೇಕೆಂದು ವ್ಯಂಗವಾಡಿದರು,
ಲೋಕಸಭಾ ಸದಸ್ಯ ಮಹಿಳಾ ದಿನಾಚರಣೆಯ ಅಂಗವಾಗಿ ರಂಗಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ವಸಹಾಯ ಸ್ವಾವಲಂಭಿ ಮಹಿಳೆಯೊರ್ವರಿಗೆ ಹಣೆಯಲ್ಲಿ ಕುಂಕುಮ ಇಲ್ಲವೆಂದು ವೈಯುಕ್ತಿವಾಗಿ ಟೀಕಿಸಿ, ಜಾತಿಯತೆ ಹಾಗೂ ಧರ್ಮದ ಬಗ್ಗೆ ಪ್ರಶ್ನಿಸುವ ಮೂಲಕ ಸಾರ್ವಜನಿಕವಾಗಿ ಮಾಡಿರುವುದು ಖಂಡನಿಯ. ಬ.ಆರ್.ಅಂಬೇಡ್ಕರ್ ಅವರ ಸಂವಿಧಾನದಲ್ಲಿ ನೀಡಿರುವ ಪ್ರಜಾಪ್ರಭುತ್ವದ ಹಕ್ಕನ್ನು ಮೊಟಕುಗೊಳಿಸುವಂತೆ ಸ್ವಾತಂತ್ರ್ಯವನ್ನು ಕಸಿದು ಕೊಳ್ಳುವಂತ ಕೋಮುವಾದದ ಮನು ಸಂಸ್ಕೃತಿಯನ್ನು ಸೇರಲು ಪ್ರಯತ್ನಿಸಿರುವುದು ಖಂಡನೀಯ ಎಂದರು.
ಮಹಿಳೆಯನ್ನು ಹಣೆಯಲ್ಲಿ ಕುಂಕುಮ ಏಕೆ ಇಟ್ಟಿಲ್ಲ ಎಂದು ವೈಯುಕ್ತಿಕ ವಿಚಾರಗಳಿಗೆ ಮೂಗು ತೋರಿಸಲು ಇವರಿಗೇನು ನೈತಿಕತೆ ಇದೆ ಇಷ್ಟೆ ಅಲ್ಲದೆ, ಗಂಡ ಇಲ್ಲದಾ ಮುಂಡ ಹೆಂಗಸರು ಬೋಳು ಹಣೆಯಲ್ಲಿರುವುದು ಕಂಡಿದ್ದೇವೆ, ನಿನಗೆ ಗಂಡ ಇಲ್ಲವಾ ಎಂದೆಲ್ಲಾ ಕೆಣಕುವ ಮಾತುಗಳಾಡಿ ಮಾನ, ಮಾರ್ಯದೆ ಕಳೆದು ಮನನೋಯುವಂತೆ ಮಾಡಿ ಮನು ಸಂಸ್ಕೃತಿಯನ್ನು ಪ್ರದರ್ಶಿಸಿರುವುದು ಅವರಲ್ಲಿ ಸಂವೇದನಾ ಶೀಲತೆಯ ಕೊರತೆಯನ್ನು ತೋರುತ್ತಿರುವುದು ಬಿಜೆಪಿಯ ಬೇಟಿ ಬಚಾವೋ ಬೇಟಿಯ ಪಡವೋ ಘೋಷಣೆಯ ಮುಖವಾಡ ಕಳಚಿದೆ ಎಂದು ಕಿಡಿ ಕಾರಿದರು,
ಲೋಕಸಭಾ ಸದಸ್ಯರಿಗೆ ತಾಕತ್ತು ಇದ್ದರೆ, ದಮ್ಮು ಇದ್ದರೆ, ಮಹಿಳೆರ ಬಗ್ಗೆ ಗೌರವ ಇದ್ದರೆ ಅವರು ನೊಂದ ಮಹಿಳೆಗೆ ಹೋಗಿ ಕ್ಷೆಮೆಯಾಚಿಸುವ ಮೂಲಕ ಗೌರವ ನೀಡುವಂತಾಗಲಿ ಎಂದು ಸವಾಲ್ ಹಾಕಿದರು,
ಬಿಜೆಪಿ ಪಕ್ಷವು ಅಭಿವೃದ್ದಿಗೆ ಮಾತನಾಡದೆ ನಾಲಿಗೆಗೆ ಹಿಡಿತವಿಲ್ಲದ ಭಾಷಣಗಳನ್ನು ಮಾಡುವ ಮೂಲಕ ಹಿಡಿತ ತಪ್ಪಿದೆ ಎಂದು ದೂರಿದ ಅವರು ಗ್ಯಾಸ್ ಬೆಲೆ,ಪೆಟ್ರೋಲ್‌ಬೆಲೆ, ಅಡುಗೆ ಎಣ್ಣೆ ಬೆಲೆಗಳು ಒಂದಕ್ಕೆ ನಾಲ್ಕು ಪಟ್ಟು ಏರಿಕೆ ಮಾಡಿ ಬಡವರ ಜೀವನದ ಮೇರೆ ಬರೆ ಎಳಿದಿದೆ ಎಂದು ಅರೋಪಿಸಿದ ಅವರು ಪಂಚಾಯತ್ ಚುನಾವಣೆಗಳಲ್ಲಿ ಮಹಿಳಾ ಮೀಸಲಾತಿ ವಿರುದ್ದು ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆಗೆ ಪ್ರಯತ್ನಿಸಿದ ಬಿಜೆಪಿಯವರು ಮಹಿಳಾ ವಿರೋಧಿಗಳು ಮಹಿಳಾ ಸಬಲೀಕರಣಕ್ಕೆ ಅಡ್ಡಿ ಪಡೆಸಿದವರು ಎಂದು ದೂರಿದರು.