ಬಿಜೆಪಿ ಸರ್ಕಾರದ ಪ್ರಗತಿ ರಥಯಾತ್ರೆಗೆ ಚಾಲನೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ.7 :- ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ  ನಿಂಬಳಗೆರೆಯಲ್ಲಿ  ಕರ್ನಾಟಕದಲ್ಲಿ ಬಿಜೆಪಿ  ಸರ್ಕಾರದ ಸಾಧನೆಗಳ  ಪ್ರಗತಿ ರಥದ ಯಾತ್ರೆಗೆ ಬಿಜೆಪಿ ಯುವ  ಜಿಲ್ಲಾ  ಪ್ರಧಾನಕಾರ್ಯದರ್ಶಿ ಹನುಮಂತಪ್ಪ ಶಿಂದೆ  ಚಾಲನೆ ನೀಡಿದರು. 
ಈ ರಥಯಾತ್ರೆಯ ಕಾರ್ಯಕ್ರಮವು  ಬಿಜೆಪಿ ತಾಲೂಕು ಯುವ ಮೋರ್ಚಾ ಅಧ್ಯಕ್ಷರಾದ ಗುಳಿಗಿ  ವೀರೇಶ್ ಅವರ‌ ನೇತೃತ್ವದಲ್ಲಿ ಜರುಗಿತು. ಈ ಸಂದರ್ಭದಲ್ಲಿ  ಬಿಜೆಪಿ  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರ್ಯಪಾಪಣ್ಣ,  ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ವೀರಭದ್ರಪ್ಪ ,‌ಭರತ್ ರಾಮ್ , ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಸಚಿನ್  ಅಜೇಯ ಕುಮಾರ್ , ಮಹಿಳಾ ಮೋರ್ಚಾ ಅಧ್ಯಕ್ಷರಾದ ಪವಿತ್ರ , ಎ ಪಿ ಎಂ ಸಿ ಉಪಾಧ್ಯಕ್ಷರಾದ ಜೆ ಸಿದ್ದೇಶ್, ಯುವ ಮೋರ್ಚಾ ‌ ಪಾಧಧಿಕಾರಿಗಳು ಹಾಗೂ ಗ್ರಾಮದ ಮುಖಂಡರಾದ  ರಾಜೇಂದ್ರ ಗೌಡ, ರಮೇಶ್  ,ಗಾಣಗಟ್ಟೆ ಮಹಾಂತೇಶ್ , ಇನ್ನು ಮುಂತಾದ ಮುಖಂಡರು ಉಪಸ್ಥಿತರಿದ್ದರು.