ಬಿಜೆಪಿ ಸರ್ಕಾರದ ಎಲ್ಲ ಆದೇಶ ರದ್ದು: ಅರಳಿ ಶ್ಲಾಘನೆ

ಬೀದರ್: ಮೇ.24:ಹಿಂದಿನ ಬಿ.ಜೆ.ಪಿ. ನೇತೃತ್ವದ ಸರ್ಕಾರ ಕೈಗೊಂಡಿರುವ ಎಲ್ಲ ಇಲಾಖೆಗಳ ಹಾಗೂ ಇಲಾಖೆಗಳ ಅಧೀನಕ್ಕೊಳಪಡುವ ನಿಗಮ/ಮಂಡಳಿ/ಪ್ರಾಧಿಕಾರಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಎಲ್ಲಾ ಮುಂದಿನ ಹಣ ಬಿಡುಗಡೆ ಪಾವತಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಡೆ ಹಿಡಿಯಲು ಮುಖ್ಯಮಂತ್ರಿ ಸಿದ್ರಾಮಯ್ಯನವರು ಸರ್ಕಾರ ಆದೇಶ ಹೊರಡಿಸಿದನ್ನು ತಾನು ಸ್ವಾಗತಿಸುವುದಾಗಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಹಿಂದಿನ ಬಿ.ಜೆ.ಪಿ. ನೇತೃತ್ವದ ಸರ್ಕಾರ ಶೆ, 40% ಕಮಿಷನ ಪಡೆದು ಬ್ರಷ್ಟಚಾರದಲ್ಲಿ ತೊಡಗಿದ ವಿಷಯ ರಾಜ್ಯದ ಜನತೆಗೆ ತಿಳಿದ ವಿಷಯವಾಗಿದ್ದು, ಬ್ರಷ್ಟತೆಯಿಂದ ಕೂಡಿದ ಕಾಮಗಾರಿಗಳನ್ನು ಹಾಗೂ ಯೋಜನೆಗಳನ್ನು ರಾಜ್ಯದ ಜನರಿಗೆ ಮಾರಕವಾಗಿರುವುದರಿಂದ ತಕ್ಷಣ ತಡೆ ಹಿಡಿಯಲು ಆದೇಶಿಸಿರುವ ಮುಖ್ಯಮಂತ್ರಿಗಳ ಕಾರ್ಯ ಶ್ಲಾಘನಿಯವಾದದ್ದು ಎಂದು ಅರಳಿ ಹೇಳಿದ್ದಾರೆ.