ಬಿಜೆಪಿ ಸರ್ಕಾರದಿಂದ ಭಯೋತ್ಪಾದನೆ ಮುಕ್ತ ಭಾರತ – ಯತ್ನಾಳ್.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ. 28 :- ಕಳೆದ ಎಂಟು ವರ್ಷದಿಂದ ಕೇಂದ್ರದಲ್ಲಿ ಬಿಜೆಪಿಯ ಮೋದಿ ಆಡಳಿತದ ಸರ್ಕಾರ  ಅಧಿಕಾರದಲ್ಲಿದ್ದು ಇಡೀ ಭಾರತವೇ ಭಯೋತ್ಪಾದನೆ ಮುಕ್ತವಾಗಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಎಂದು ಮಾಜಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಾಲೂಕಿನ ಕಾನಾಹೊಸಹಳ್ಳಿ ಗ್ರಾಮದಲ್ಲಿ ನಡೆದ ಬಿಜೆಪಿ ಪ್ರಚಾರದ ಸಭೆಯಲ್ಲಿ ಭಾಗವಹಿಸಿ ಕೊಲುಮೆಹಟ್ಟಿಯಿಂದ ಜರುಗಿದ ರೋಡ್ ಶೋ ನಲ್ಲಿ ಭಾಗವಹಿಸಿ ನಂತರ ಮದಕರಿ ವೃತ್ತದಲ್ಲಿ ಮಾತನಾಡುತ್ತ ಮೋದಿ ಆಡಳಿತದ ಬಿಜೆಪಿ ಸರ್ಕಾರ ಇಡೀ ವಿಶ್ವದಲ್ಲಿ ಆರ್ಥಿಕ ವ್ಯವಸ್ಥೆಯನ್ನು ಸುಸ್ಥಿತಿಗೆ ತಂದು ಜಗತ್ತಿನ ಐದನೇ ಸ್ಥಾನದಲ್ಲಿದೆ ಎಂದರು.
ಕಾಂಗ್ರೇಸ್ ದೇಶದಲ್ಲಿ ನೆಲೆಕಳೆದುಕೊಳ್ಳುತ್ತಿದೆ  ಜನತೆ ಬಿಜೆಪಿಯ ಆಡಳಿತವನ್ನು ಮೆಚ್ಚಿ ರಾಜ್ಯದಲ್ಲಿ ಮತ್ತೇ ಬಿಜೆಪಿ ಅಧಿಕಾರ ಹಿಡಿಯುವುದರಲ್ಲಿ ಸಂಶಯವಿಲ್ಲ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಜಳಜಳ ಎಂದರು.
ಬಿಜೆಪಿ ಕೂಡ್ಲಿಗಿ ಅಭ್ಯರ್ಥಿ ಲೋಕೇಶ್ ವಿ ನಾಯಕ ಮಾತನಾಡಿ ಕಳೆದ ಎಂಟು ವರ್ಷದಿಂದ ನಿಮ್ಮ ಜೊತೆಗಿದ್ದೇನೆ ನಿಮ್ಮ ಮನೆಮಗನಾಗಿದ್ದು ಬಿಜೆಪಿ ಪಕ್ಷ ನನಗೆ ಟಿಕೇಟ್ ಕೊಟ್ಟು ಆಶೀರ್ವದಿಸಿದೆ ನೀವು ಮತ ಹಾಕಿ ಆಶೀರ್ವದಿಸಿದರೆ ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸುವ ಮೊದಲ ಆದ್ಯತೆ ನನ್ನದಾಗಿದೆ. ಸೋತಾಗಲೇ ನಿಮ್ಮ ಜೊತೆ ಇರುವವನು ಗೆದ್ದರೆ ಇರಲಾರನೇನು ಎಂದರು.
ಈ ಸಂದರ್ಭದಲ್ಲಿ ಸಂಸದ ದೇವೇಂದ್ರಪ್ಪ ಕೂಡ್ಲಿಗಿ ಮಂಡಲ ಅಧ್ಯಕ್ಷ ಚನ್ನಪ್ಪ, ಗುಳಿಗಿ ವೀರೇಂದ್ರ, ಸೂರ್ಯಪಾಪಣ್ಣ, ಪವಿತ್ರಾ ಹಾಗೂ ಇತರರಿದ್ದರು