ಬಿಜೆಪಿ ಸರ್ಕಾರದಿಂದ ಕೇಂದ್ರಮಾದರಿ ವೇತನ ಜಾರಿ ; ವೈ.ಎ ನಾರಾಯಣ ಸ್ವಾಮಿ ಭರವಸೆ

ದಾವಣಗೆರೆ.ಆ.೧: 7ನೇ ವೇತನ ಆಯೋಗವನ್ನು ಬಿಜೆಪಿ ಸರ್ಕಾರವೇ ಮಾಡಲಿದೆ ಎಂದು ರಾಜ್ಯ ಸರ್ಕಾರದ ಮುಖ್ಯಸಚೇತಕರಾದ ವೈ.ಎ.ನಾರಾಯಣಸ್ವಾಮಿ. ಹೇಳಿದರು.. ನಗರದ ಸರ್ಕಾರಿನೌಕರರ ಸಮುದಾಯಮಂದಿರದಲ್ಲಿ.ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ  ಸಂಘದ ದಾವಣಗೆರೆ ಜಿಲ್ಲೆಯ ನಿರ್ದೇಶಕರುಗಳು ಮತ್ತು ಪದಾಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ಬಿಜೆಪಿ ಸರ್ಕಾರದಲ್ಲಿ ಕೇಂದ್ರಮಾದರಿ ವೇತನ ಜಾರಿಮಾಡಲಾಗುವುದು. ನಮ್ಮ ಸರ್ಕಾರದಲ್ಲೇ ಶಿಕ್ಷಕರುಗಳ ಸಮಸ್ಯೆ ಬಗೆಹರಿಯುತ್ತವೆ. ಏಕೆಂದರೆ ವಿದ್ಯಾವಂತರೆ ಶಿಕ್ಷಣ ಸಚಿವರಾಗುತ್ತಾರೆ. ಆದ್ದರಿಂದ ಶಿಕ್ಷಣ ಇಲಾಖೆ  ಮತ್ತು ಶಿಕ್ಷಕರ  ಸಮಸ್ಯೆಗಳನ್ನು  ಬಗೆಹರಿಸುತ್ತಿದೆ ಕಾಂಗ್ರೆಸ್ ಸರ್ಕಾರ ಹಾಗೂ ಇತರೆ ಸರ್ಕಾರ ಇದ್ದಾಗ  ಶಿಕ್ಷಣ ಸಚಿವರಿಗೂ ಇಲಾಖೆಗೆ ಸಾಮ್ಯತೆ ಇರಲಿಲ್ಲವೆಂದರು. ಶಿಕ್ಷಣ ಸಮಾಜದಲ್ಲಿ ಸಮಾನತೆ ತರುತ್ತದೆ  ನೂತನವಾಗಿ ಆಯ್ಕೆಯಾದ ನಿರ್ದೇಶಕರುಗಳು ನಿರಂತರವಾಗಿ. ಅಧಿಕಾರಿಗಳು ಮತ್ತು ಇಲಾಖೆಯ ಸಂಪರ್ಕದಲ್ಲಿದ್ದು ಉತ್ತಮ ಕಾರ್ಯ ನಿರ್ವಹಿಸಬೇಕೆಂದು ಹೇಳಿದರು.ನಿಮ್ಮ ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ಬಿಜೆಪಿ ಸರ್ಕಾರ ಬಗೆಹರಿಸಲಿದೆ. ಶಿಕ್ಷಕರ ವೇತನವನ್ನು ಇಲಾಖೆಯವರು ಸಮಯಕ್ಕೆ ಸರಿಯಾಗಿ ನೀಡಬೇಕು.ನಿಮ್ಮ ಸಮಸ್ಯೆ ಗಳಿಗೆ ಚಿದಾನಂದಗೌಡ ಮತ್ತು ನಾನು ಪ್ರಾಮಾಣಿಕವಾಗಿ ಬಗೆಹರಿಸುತ್ತೇವೆ.ಚಿದಾನಂದಗೌಡರನ್ನು ಗೆಲ್ಲಿ ಸಿ ನನ್ನ ಶಕ್ತಿ ಹೆಚ್ವಿಸಿದ್ದೀರಾ ಎಂದರು. ಶಾಸಕ ಚಿದಾನಂದ.ಎಂ.ಗೌಡ ಮಾತನಾಡಿ. ಶಿಕ್ಷಕರುಗಳ ಕೊಡುಗೆ ದೇಶಕ್ಕೆ ಅಪಾರವಾದದ್ದು ಬೇರೆಯಾವ ಕ್ಷೇತ್ರವು ಇಂತಹ ಕೊಡುಗೆ ನೀಡಲಾರದು .ನಿಮ್ಮಗಳ ಯಾವುದೆ ಕೆಲಸವಿರಲಿ ನಾರಾಯಣ ಸ್ವಾಮಿ ನಾನು ಮಾಡಿಕೊಡುತ್ತವೆ ಈಗಾಗಲೇ.ಬಿಜೆಪಿ ಸರ್ಕಾರ ಶಿಕ್ಷಣ ಇಲಾಖೆ ಮತ್ತು ಶಿಕ್ಷಕರು ಗಳಿಗೆ  ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆ. ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿ ಖಂಡಿತ ದೇಶವೇ ಹೊಸದಿಕ್ಕಿನತ್ತ ಹೊಗುವಂತಿದೆ ಪ್ರಧಾನ ಮಂತ್ರಿ ಮೋದಿಜಿಯವರು ಸಾಕಷ್ಟು ಶಿಕ್ಷಣ ತಜ್ಞರ ಜೊತೆ ಚರ್ಚಿಸಿ ಯೋಜನೆ ಜಾರಿಗೆ ತಂದಿರುವುದು .ರಾಷ್ಟ್ರೀಯ ಶಿಕ್ಷಣ. ಹೊಸ ನೀತಿ ಬಗ್ಗೆ ಒಂದು ದಿನ ಕಾರ್ಯಗಾರ ಮಾಡಲಾಗುವುದು ಎಂದರು. ನಿಕಟಪೂರ್ವ ಅಧ್ಯಕ್ಷರಾದ ಎಂ.ಮಂಜುನಾಥ ಸ್ವಾಮಿಯವರು ಮಾತನಾಡಿ. ಅನುದಾನಿತ ಶಾಲಾ ಶಿಕ್ಷಕರು ಗಳಿಗೆ. ಜ್ಯೋತಿಸಂಜೀವಿನಿಯೋಜನೆ ಜಾರಿಮಾಡಿ.ಅದಕ್ಕೆ ಶಾಶ್ವತ ಮನ್ನಣೆಯಾಗಬೇಕು. ಹಾಗೂ ನವೀಕರಣದ ಷರತ್ತುಗಳು ಸಡಿಲವಾಗಬೇಕೆಂದರು.ಈ ಸಮಾರಂಭದಲ್ಲಿ. ಜಿಲ್ಲಾಸರ್ಕಾರಿ ನೌಕರರಸಂಘದ ಜಿಲ್ಲಾಧ್ಯಕ್ಷರಾ.ಬಿ.ಪಾಲಾಕ್ಷಿ.ಶ್ರೀನಿವಾಸ್ ಮಾತನಾಡಿದರು. ವೇದಿಕೆಯಲ್ಲಿ. ದ್ವಾರಕೀಶ್ ನಾಯ್ಕ್.ಎಸ್.ಚಂದ್ರಪ್ಪ.ಬಿ.ಆರ್.ಡಿ.ಡಿ.ಹಾಲಪ್ಪ.ರಾಮ ರೆಡ್ಡಿ.ಪದ್ದಪ್ಪ.ಬಿ.ಇ.ಓ.ನಿರಂಜನ್.ಮೂರ್ತಿ. ಅಂಜಣ್ಣ.ಸ್ವಾಮಿ ಮತ್ತಿತರಿದ್ದರು.

Attachments area