ಬಿಜೆಪಿ ಸರ್ಕಾರಕ್ಕೆ ರೈತಪರ ಕಾಳಜಿ ಇಲ್ಲ: ನೀರಲಕೇರಿ

ಚನ್ನಮ್ಮನ ಕಿತ್ತೂರ, ನ 24: ದೇಶದಲ್ಲಿ ರೈತಪರ ಕಾಳಜಿ ಬಿಜೆಪಿ ಸರ್ಕಾರಕ್ಕೆ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಪಿ.ಎಚ್. ನೀರಲಕೇರಿ ಹೇಳಿದರು.
ತಾಲೂಕಿನ ನಿಚ್ಚಣಕಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಖಂಡ ಕರ್ನಾಟಕ ರೈತ ಸಂಘದ ಚಿಂತನ ಸಭೆಯಲ್ಲಿ ಅಧ್ಯಕ್ಷಸ್ಥಾನ ವಹಿಸಿ ಮಾತನಾಡಿದರು. ಅನ್ನ ನೀಡುವ ರೈತರ ವಿಷಯದಲ್ಲಿ ಮೋದಿ ಅವರು ಕಲ್ಲು ಹೃದಯ ಹೊಂದಿದ್ದಾರೆ. ಇಂಥ ಸರ್ಕಾರ ನಮಗೇಕ್ಕೆ ಬೇಕೆ? ಎಂದು ಪ್ರಶ್ನಿಸಿದ ಅವರು, ರೈತರಿಗೆ ವಿರೋಧವಾಗಿ ಕಾನೂನು ತಿದ್ದುಪಡಿ ಮಾಡಿದ್ದಾರೆ. ಮುಂಬರು ದಿನಗಳಲ್ಲಿ ರೈತರ ಪರ ಕಾಳಜಿವಹಿಸುವ ಸರ್ಕಾರಕ್ಕೆ ನಾವು ಬೆಂಬಲ ನೀಡೋಣ. ಭ್ರಷ್ಟ ಸರ್ಕಾರವನ್ನು ಕಿತ್ತೆಸೆಯೋಣ ಎಂದರು.
ಬೇರೆ ದೇಶಗಳಲ್ಲಿ ಕೋವಿಡ್‍ನಿಂದ ಮೃತರಾದವರಿಗೆ ಸ್ಪಂದಿಸುವ ಮೋದಿ ಅವರು ನಮ್ಮ ದೇಶದಲ್ಲಿ ಅಸಂಖ್ಯಾತ ರೈತರು ಕೋವಿಡ್‍ನಿಂದ ಬಲಿಯಾದರೂ ಸರಿಯಾಗಿ ಸ್ಪಂದಿಸದಿರುವುದು ವಿಷಾದನೀಯ ಎಂದರು.
ಅಥಿತಿಗಳಾಗಿ ಮಾನಾಡಿದ ಮಾಜಿ ಸಚಿವ ಡಿ.ಬಿ. ಇನಾಮದಾರ ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗುತ್ತಿಲ್ಲಿ. ಕಬ್ಬು, ಭತ್ತ, ಗೋಧಿ ಹೊರತುಪಡಿಸಿದರೆ ಜೋಳ ಮತ್ತು ಇತರ ಬೆಳೆಗಾರರ ಬಗ್ಗೆ ಕಾಳಜಿ ವಹಿಸುತ್ತಿಲ್ಲವೆಂದು ಸರ್ಕಾರದ ಮೇಲೆ ಹರಿಹಾಯ್ದರು. ನಾನು ನಿಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡುವೆ. ರೈತರ ಹೋರಾಟದಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತ ಪಡಿಸುತ್ತೇವೆ ಎಂದು ಹೇಳಿದರು. ಅದಕ್ಕಾಗಿ 2023ರ ಚುನಾವಣೆಯಲ್ಲಿ ನನಗೆ ತಮ್ಮಿಲ್ಲರ ಬೆಂಬಲ ನೀಡಬೇಕೆಂದು ರೈತ ಸಂಘಟನೆ ಕಾರ್ಯಕರ್ತರಿಗೆ ಮನವಿ ಮಾಡಿದರು.
ಕಾಗ್ರೇಸ್ ಮುಖಂಡ ಹಬೀಬ ಶಿಲ್ಲೆದಾರ ಮಾತನಾಡಿ ನಾನು ರೈತರ ಕಷ್ಟ ಅರತ್ತಿದ್ದೇನೆ. ಅವರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಇದನ್ನೆಲ್ಲ ಅರಿತ ನಾನು ಸಹ ಕಾಗ್ರೇಸ್ ಪಕ್ಷದ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದೇನೆ. ಆದರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮತ್ತು ಮಾಜಿ ಸಚಿವ ಡಿ.ಬಿ.ಇಮಾಮದಾರ ಈ ಇಬ್ಬರ ನಿರ್ಣಯಕ್ಕೆ ಬದ್ದ. ಎಂದು ಹೇಳಿದರು.
ಪ್ರಾಸ್ತಾವಿಕ ನುಡಿ ಶಿವಾನಂದ ಹೋಳೆ ಹಡಗಲಿ, ಅಪ್ಪೇಶ ದಳವಾಯಿ, ನಿಂಗಪ್ಪ ತಡಕೋಡ, ಸಿದ್ದಣ್ಣಾ ಕಂಬಾರ ಮಹಾಂತೇಶ ರಾಹುತ, ಕಲ್ಲಪ್ಪ ಕುಗಟಿ, ಭೀಮಪ್ಪ ಕಾಸಾಯಿ, ಮಾತನಾಡಿದರು.
ಜಿ.ಪಂ. ಸದಸ್ಯ ಶಂಕರ ಹೊಳಿ, ಕೆಎನ್‍ವಿವಿ ಆಟ್ರ್ಸ ಮತ್ತು ಕಾಮರ್ಸ್, ಕಾಲೇಜ ಅಧ್ಯಕ್ಷ ಮಾಗಳೇಶ್ವರ ದಳವಾಯಿ, ರಮೇಶ ಮೊಕಾಸಿ, ಮಡಿವಾಳಪ್ಪ ವರಗನ್ನವರ, ಜೈರುದ್ದೀನ ಜಮಾದಾರ, ಪಕ್ಕಿರಪ್ಪ ದಳವಾಯಿ, ಪಕ್ಕೀರಪ್ಪ ಜಾಗಂಟಿ, ಶಿವಾನಂದ ಚಿನ್ನನವರ ಇದ್ದರು. ಬಸವರಾಜ ದಳವಾಯಿ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.