ಬಿಜೆಪಿ ಸರಕಾರದಿಂದ ಸಾಮಾಜಿಕ ನ್ಯಾಯ:ಶಾಸಕ ಸೋಮನಗೌಡ

ತಾಳಿಕೋಟೆ:ನ.16: ಬಿಜೆಪಿ ನೇತೃತ್ವದ ಸರಕಾರದಿಂದ ಯಾವುದೇ ಜಾತಿಗಳಿಗೆ ಅನ್ಯಾಯ ಮಾಡದೇ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಲಾಗಿದೆ ಎಂದು ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು.

      ಮಂಗಳವಾರರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಳವಾರ ಹಾಗೂ ಪರಿವಾರ ಸಮುದಾಯದ ಜನರಿಗೆ ಪರಿಶಿಷ್ಠ ಪಂಗಡಗಳ ಜಾತಿ ಪ್ರಮಾಣದ ಪತ್ರ ವಿತರಿಸಿ ಮಾತನಾಡುತ್ತಿದ್ದ ಅವರು ತಳವಾರ ಪರಿಹಾರ ಸಮಾಜದ 35 ವರ್ಷಗಳ ಹೋರಾಟವನ್ನು ಹಿಂದಿನ ಕಾಂಗ್ರೇಸ್ ಸರಕಾರ ನಿರ್ಲಕ್ಷ ಮಾಡುತ್ತಾ ಬಂದಿತ್ತು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಳವಾರ ಪರಿವಾರ ಸಮಾಜಕ್ಕೆ ಪರಿಶಿಷ್ಠ ಪಂಗಡ ಪ್ರಮಾಣ ಪತ್ರಗಳನ್ನು ವಿತರಿಸುವ ಮೂಲಕ ಅವರಿಗೆ ಸಾಮಾಜಿಕ ನ್ಯಾಯವನ್ನು ಸಿಗುವಂತೆ ಮಾಡಲಾಗಿದೆ. ಕಾಂಗ್ರೇಸ್ ಪಕ್ಷದಲ್ಲಿ ಹಿಂದುಳಿದ ವರ್ಗವನ್ನು ಕೇವಲ ಓಟ್ ಬ್ಯಾಂಕಗಾಗಿ ಬಳಸಿಕೊಳ್ಳಲಾಗುತ್ತದೆ ಎಂದು ಆರೋಪಿಸಿದ ಅವರು ಕೆಲವು ತಾಂತ್ರಿಕ ಕಾರಣದಿಂದ ಕೆಲವೊಂದು ಪ್ರಮಾಣ ಪತ್ರಗಳನ್ನು ವಿತರಿಸಲು ತಡವಾಗಿದೆ. ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಲು ಅಧಿಕಾರಿಗಳೊಂದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
     ಇದೇ ಸಮಯದಲ್ಲಿ ತಳವಾರ ಸಮಾಜದ ಪರವಾಗಿ ಶಾಸಕ ಸೋಮನಗೌ ಪಾಟೀಲ ಸಾಸನೂರ ಅವರನ್ನು ಸನ್ಮಾನಿಸಲಾಯಿತು.
  ಈ ಸಮಯದಲ್ಲಿ ತಹಶೀಲ್ದಾರ ಶ್ರೀಧರ ಗೋಟೂರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಬಿರಾದಾರ, ತಳವಾರ ಸಮಾಜದ ತಾಲೂಕಾಧ್ಯಕ್ಷ ಪರಶುರಾಮ ತಂಗಡಗಿ, ನ್ಯಾಯವಾದಿ ಮಲ್ಲಿಕಾರ್ಜುನ ಜೂಲಿ, ಸಮಾಜದ ಮುಖಂಡರಾದ ಶಾಂತಪ್ಪ ಇಣಚಗಲ್ಲ, ಶಾಂತಗೌಡ ಪಾಟೀಲ, ಶ್ರೀಶೈಲ ಬಿರಾದಾರ, ಸಂತೋಷ ಕುಳಗೇರಿ, ವಿಶ್ವನಾಥ ತಳವಾರ, ಮಲ್ಲಪ್ಪ ತಳವಾರ, ಭೀಮು ತಳವಾರ, ಬಿಜೆಪಿ ಮುಖಂಡ ಸಂಗನಗೌಡ ಹೆಗರೆಡ್ಡಿ, ಮುತ್ತುಗೌಡ ಮಾಳಿ, ಭೀಮನಗೌಡ ಸಿದ್ದರೆಡ್ಡಿ, ಬಸನಗೌಡ ಬಿರಾದಾರ(ಫೀರಾಪೂರ), ಸಾಯಬಣ್ಣ ಆಲ್ಯಾಳ, ಸಿದ್ದು ಬುಳ್ಳಾ, ಕಾಶಿರಾಯಗೌಡ ಬಿರಾದಾರ(ಫೀರಾಪೂರ), ನಾನಾಗೌಡ ಬಿರಾದಾರ, ಶರಣಗೌಡ ಗೋಟಖಂಡ್ಕಿ ಮೊದಲಾದವರು ಇದ್ದರು.