ಬಿಜೆಪಿ ಸದಸ್ಯರಿಂದ ವಿನಯ್‌ಗೆ ಸನ್ಮಾನ

ರಾಯಚೂರು.ನ.13- ನಗರಸಭೆ ಅಧ್ಯಕ್ಷರಾದ ಈ.ವಿನಯ್ ಅವರಿಗೆ ಭಾರತೀಯ ಜನತಾ ಪಕ್ಷದ ನಗರಸಭೆ ಸದಸ್ಯರು ಸನ್ಮಾನಿಸಿ ಗೌರವಿಸಿದರು.
ಇಂದು ನಗರಸಭೆ ಸದಸ್ಯರೆಲ್ಲಾ ಅಧ್ಯಕ್ಷರನ್ನು ಭೇಟಿಯಾಗಿ ಸನ್ಮಾನಿಸಿ, ನಗರದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿ, ಕಾರ್ಯ ನಿರ್ವಹಿಸಲು ಸೂಚನೆ ನೀಡಿದರು. ನಗರದ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸುತ್ತದೆ. ನಗರಸಭೆ ಆಡಳಿತ ಉತ್ತಮಗೊಳಿಸಿ, ಜನರ ನಿರೀಕ್ಷೆಯಂತೆ ಅಭಿವೃದ್ಧಿ ಕಾರ್ಯ ಕೈಗೊಳ್ಳುವತ್ತ ಎಲ್ಲರೂ ಶ್ರಮಿಸುವ ಅಗತ್ಯವಿದೆ. ಬಿಜೆಪಿ ನಗರ ಅಭಿವೃದ್ಧಿ ವಿಷಯದಲ್ಲಿ ಸದಾ ಬೆಂಬಲಕ್ಕೆ ನಿಲ್ಲುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರವೀಂದ್ರ ಜಲ್ದಾರ್, ಕಡಗೋಳ ಆಂಜಿನೇಯ್ಯ, ಎನ್.ಶ್ರೀನಿವಾಸ ರೆಡ್ಡಿ, ದೊಡ್ಡ ಮಲ್ಲೇಶಪ್ಪ, ಸನ್ನಿಬಿನ್ನಿ, ಶ್ರೀನಿವಾಸ ಪೋಗಲ್, ಶರಣಪ್ಪ ಬಲ್ಲಟಗಿ, ಮಹೇಂದ್ರ ರೆಡ್ಡಿ, ಈ.ಶಶಿರಾಜ ಸೇರಿದಂತೆ ಅನೇಕರು ಉಪಸ್ಥಿತರಿದ್ದರು