ಬಿಜೆಪಿ ಸಂಸ್ಥಾಪನಾ ದಿನಾಚರಣೆ

ಕೊಲ್ಹಾರ: ಏ.7:ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ನೇತೃತ್ವದಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಪಟ್ಟಣದಲ್ಲಿ ಜರುಗಿತು.
ಕಾರ್ಯಕ್ರಮದ ನಿಮಿತ್ತ ಧ್ವಜಾರೋಹಣ ಭಾರತಮಾತೆ ಹಾಗೂ ಅನೇಕ ಮಹನೀಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ನಾಯಕರ ಹಾಗೂ ಕಾರ್ಯಕರ್ತರ ತ್ಯಾಗ ಬಲಿದಾನವನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಅಶೋಕ ಗಿಡ್ಡಪ್ಪಗೋಳ, ರಾಜಶೇಖರ್ ಶಿಲವಂತ, ಈರಯ್ಯ ಮಠಪತಿ, ಮಳೆಪ್ಪ ಬರಗಿ, ಬಸಪ್ಪ ಕೊಠಾರಿ, ಸಂಗಪ್ಪ ಹುಚ್ಚಪ್ಪಗೋಳ, ಮುದಿಯಪ್ಪ ಚೌದ್ರಿ ಸಹಿತ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.