ಬಿಜೆಪಿ ಸಂಸ್ಥಾಪನಾ ದಿನಾಚರಣೆ

ಲಕ್ಷ್ಮೇಶ್ವರ,ಏ8: ಪಟ್ಟಣದಲ್ಲಿ ಮಂಗಳವಾರ ಬಿಜೆಪಿಯ 41ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಧ್ವಜಾರೋಹಣ ನೆರವೇರಿಸಿ ಬಳಿಕ ಮಾತನಾಡಿದ ಶಾಸಕ ರಾಮಣ್ಣ ಲಮಾಣಿ ಅವರು ಬಿಜೆಪಿಯ ಹಿರಿಯ ಮುತ್ಸದ್ದಿ ಮುತ್ಸದ್ಧಿ ನಾಯಕರ ಲಕ್ಷಲಕ್ಷ ಕಾರ್ಯಕರ್ತರ ಪರಿಶ್ರಮದ ಫಲವಾಗಿ ಬಿಜೆಪಿ ಹೆಮ್ಮರವಾಗಿ ಬೆಳೆದಿದ್ದು ಜಗತ್ತಿನಲ್ಲಿಯೇ ಕೋಟಿ ಕಾರ್ಯಕರ್ತರು ಹೊಂದಿರುವ ಏಕೈಕ ಪಕ್ಷವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷರಾದ ಚಂಬಣ್ಣ ಬಾಳೆಕಾಯಿ ಮಂಡಲ ಪ್ರಧಾನ ಕಾರ್ಯದರ್ಶಿ ಗಂಗಾಧರ ಮೆಣಸಿನಕಾಯಿ, ನಗರ ಘಟಕದ ಅಧ್ಯಕ್ಷ ದುಂಡೇಶ್ ಕೊಟಗಿ, ಬಿಜೆಪಿ ಯುವ ಮೋರ್ಚಾ ಘಟಕದ ಅಧ್ಯಕ್ಷರಾದ ನೀಲಪ್ಪ ಕರಜಕ್ಕಣವರ, ರಮೇಶ್ ಹಾಳತೋಟದ, ವಿಜಯ್ ಕುಂಬಾರ, ಸಂತೋಷ ಜಾವೂರ್, ಪ್ರಕಾಶ್ ಮಾದನೂರ, ವಿಶಾಲ ಬಟಗುರಕಿ, ಅಶೋಕ್ ನಿರಾಲೋಟಿ, ಆಕಾಶ್ ಸವದತ್ತಿ, ಚಂದ್ರು ಹಂಪಣ್ಣವರ, ಬಸವರಾಜ ಕಲ್ಲೂರ, ಚಂದ್ರು ಮಾಗಡಿ ಸೇರಿ ಮತ್ತಿತರರು ಇದ್ದರು.