ಬಿಜೆಪಿ ಶಿಸ್ತು ಸಂಘಟನೆಯ ಪಕ್ಷ

ಆಳಂದ ;ಎ.7: ತಾಲೂಕಿನ ಮಾದನಹಿಪ್ಪರಗಾ ಬಿಜೆಪಿ ಪಕ್ಷವು ಶಿಸ್ತು ಮತ್ತು ಸಂಘಟನಾತ್ಮಕ ಪಕ್ಷವಾಗಿ ದೇಶದ ಪ್ರಗತಿಗಾಗಿ ಸದಾ ಶ್ರಮಸಿಸುತ್ತಿದೆ ಎಂದು ಯುವ ಮುಖಂಡ ಬಸವರಾಜ ಶಾಸ್ರ್ತಿ ಹೇಳಿದರು. ಮಾದನಹಿಪ್ಪರಗಾದಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ ಓನಾಮಶೆಟ್ಟಿ ನೇತೃತ್ವದಲ್ಲಿ ಬಿಜೆಪಿ ಸಂಸ್ಥಾಪನ ದಿನಾಚರಣೆ ಪ್ರಯಕ್ತ ಭಾರತ ಮಾತೆ ಹಾಗೂ ಶಾಮ ಪ್ರಸಾದ ಮೂಖರ್ಜಿ ದಿನದಯಾಳ ಮೂಖರ್ಜಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ಪಕ್ಷಯು ಗ್ರಾಮೀಣಾಭಾಗದಲ್ಲಿ ಸಾವಿರಾರು ಕಾರ್ಯಕರ್ತರನ್ನು ಹೊಂದಿದ್ದು ಪಕ್ಷದ ಏಳಿಗೆಗಾಗಿ ಸದಾ ದುಡಿಯುವ ಯುವಕರು ಪಕ್ಷದ ಬಲವರ್ದನೆ ಹಾಗೂ ಅಭಿವೃದ್ದಿಗಾಗಿ ಕೆಲಸ ಮಾಡುತ್ತಿದ್ದಾರೆ.ಅಂದ ಸ್ಥಾಪಿತವಾದ ಪಕ್ಷ ಇಂದು ದೇಶದ ಸರ್ಮೋತೋಮುಖ ಬೆಳವಣಿಗೆ ಕಂಕಣಬದ್ದಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.ಗ್ರಾ.ಪಂ ಸದಸ್ಯ ಸಿದು ಅಷ್ಟಗಿ ಮುಖಂಡರಾದ ಮಲ್ಲಿನಾಥ ಪರೇಣಿ ನಾರಾಯಣ ಮಾಲಾಖಾರೆ ರಾಮು ಚಿಂಚೋಳಿ ಇತರರು ಇದ್ದಾರೆ.