ಬಿಜೆಪಿ ಶಿವಾಜಿರಾವ ಭೋಸ್ಲೆ ಕೋವಿಡ್‍ಗೆ ಬಲಿ

ಭಾಲ್ಕಿ:ಮೇ.1: ತಾಲೂಕಿನ ಗಣೇಶಪೂರ ವಾಡಿಯ ಬಿಜೆಪಿ ಮುಖಂಡ ಶಿವಾಜಿರಾವ ಭೋಸ್ಲೆ(55) ಕಲಬುರ್ಗಿ ಆಸ್ಪತ್ರೆಯಲ್ಲಿ ಬುಧವಾರ ಕೋವಿಡ್‍ಗೆ ಬಲಿಯಾಗಿದ್ದಾರೆ.ಭೋಸ್ಲೆ ಅವರಿಗೆ ಕೊರೊನಾ ದೃಢಪಟ್ಟಿರುವುದರಿಂದ ಕಲಬುರ್ಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರು ಎಳೆದಿದ್ದಾರೆ.

ಮೃತರು ಪತ್ನಿ,ಒರ್ವ ಪುತ್ರ,ಒರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ.

ಅಂತ್ಯಕ್ರಿಯೆ:ತಾಲೂಕಿನ ಸ್ವಗ್ರಾಮ ಗಣೇಶಪೂರವಾಡಿಯಲ್ಲಿ ಬುಧವಾರ ಸಾಯಂಕಾಲ ಅಂತ್ಯಕ್ರಿಯೆ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಂತಾಪ::ಶಿವಾಜಿರಾವ ಭೋಸ್ಲೆ ಅವರು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ,ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ದೊರಕಿಸಿಕೊಡುವಲ್ಲಿ ನಿಪೂಣರಾಗಿದ್ದರು.ಅವರ ಅಗಲುವಿಕೆ ಬಿಜೆಪಿಗೆ ಸಿಡಿಲು ಬಡಿದಂತೆ ಶಾಕ್ ಆಗಿದೆ.ಭಗವಂತ ಆವರ ಆತ್ಮಕ್ಕೆ ಚಿರಶಾಂತಿ ನೀಡಲಿ ಮತ್ತು ಅವರ ಕುಟುಂಬದವರಿಗೆ ಅಗಲುವಿಕೆ ನೋವು ಸಹಿಸಿಕೊಳ್ಳುವ ಶಕ್ತಿ ದಯಪಾಲಿಸಲಿ ಎಂದು ಮಾಜಿ ಶಾಸಕ ಪ್ರಕಾಶ ಖಂಡ್ರೆ,ಎನ್.ಎಸ್.ಎಸ್.ಕೆ.ಅಧ್ಯಕ್ಷ ಡಿ.ಕೆ.ಸಿದ್ರಾಮ್,ಮುಖಂಡರಾದ ಶಿವಾ ಲೋಖಂಡೆ,ಸುಭಾಷರಾವ ಬಿರಾದಾರ ಸೇರಿದಂತೆ ಅನೇಕರು ಸಂತಾಪ ಸೂಚಿಸಿ,ಪ್ರಾರ್ಥಿಸಿದ್ದಾರೆ.