ಬಿಜೆಪಿ ವ್ಯಕ್ತಿ ಕೇಂದ್ರಿತ ಪಕ್ಷವಲ್ಲ:ಮಲ್ಲಿಕಾರ್ಜುನ ಹೊನಗೇರಾ

ಸೈದಾಪುರ:ಎ.2:ಬಿಜೆಪಿ ಇತರೆ ಪಕ್ಷಗಳಂತೆ ವ್ಯಕ್ತಿ ಕೇಂದ್ರಿತವಾಗಿಲ್ಲ, ಇದೊಂದು ಸಿದ್ಧಾಂತ ಕೇಂದ್ರಿತ ಪಕ್ಷವಾಗಿದ್ದೂ, ದೇಶದ ನೆಲ, ಜಲ, ಧರ್ಮ ಸಂಸ್ಕøತಿಯ ಉಳಿವಿಗಾಗಿ ಹುಟ್ಟಿಕೊಂಡಿರುವ ಪಕ್ಷವಾಗಿದೆ ಎಂದು ಗುರುಮಠಕಲ್ ಮಂಡಲಾಧ್ಯಕ್ಷ ಮಲ್ಲಿಕಾರ್ಜುನ ಹೊನಗೇರಾ ಹೇಳಿದರು.

ಪಟ್ಟಣದ ಸಗರ ಸಂಸ್ಕøತಿಕ ಭವನದಲ್ಲಿ ನಡೆದ ಗುರುಮಠಕಲ್ ಮಂಡಲ ಎಸ್.ಟಿ ಮೋರ್ಚಾದ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ದೇಶ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಅಭಿವೃದ್ಧಿಯ ಪಥದಡೆಗೆ ಸಾಗುತ್ತಿದೆ. ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡುವ ಮೂಲಕ ಮುಂದಿನ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಪಕ್ಷವನ್ನು ಸಂಘಟಿಸುವಂತೆ ಸಲಹೆ ನೀಡಿದರು,

ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ರಾಘವೇಂದ್ರ ಯಕ್ಷಿಂತಿ ಮಾತನಾಡಿ, ಪಕ್ಷ ನೀಡುವ ಜವಾಬ್ದಾರಿಯನ್ನು ಶಿಸ್ತಿನಿಂದ ನಿರ್ವಹಿಸಿ ಮುಂದಿನ ಭಾರಿ ಗುರುಮಠಕಲ್‍ನಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಎಸ್ಟಿ ಮೋರ್ಚಾದ ಕಾರ್ಯಕರ್ತರು ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.

ಮಂಡಲ ಎಸ್ಟಿ ಮೋರ್ಚಾ ಅಧ್ಯಕ್ಷ ಲಕ್ಷ್ಮಣ್ ನಾಯಕ ಓಬಳಾಪುರ್ ಪ್ರಾಸ್ಥಾವಿಕ ಮಾತನಾಡಿ, ಬಿಜೆಪಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ನಾಯಕರನ್ನಾಗಿ ಮಾಡುವ ಏಕೈಕ ಪಕ್ಷವಾಗಿದ್ದೂ, ನಾಯಕ ಬದಲಾದರೂ ಪಕ್ಷ ಬದಲಾಗಲ್ಲ ಎಂದು ಹೆಮ್ಮೆಯಿಂದ ಹೇಳೋಣ ಎಂದರು.

ಜಿಲ್ಲಾ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೃಷ್ಣಾ ನಾಯಕ, ಮಲ್ಲೇಶ್ ನಾಯಕ ಕುಡ್ಲೂರು, ಮಂಡಲ ಪ್ರಧಾನ ಕಾರ್ಯದರ್ಶಿ ಜಗದೀಶ್ ಮೇಗಂಜಿ, ರಾಘವೇಂದ್ರರೆಡ್ಡಿ ವಡವಟ್, ಜಿಲ್ಲಾ ಎಸ್ಟಿ ಮೋರ್ಚಾ ಉಪಾಧ್ಯಕ್ಷ ಬಸ್ಸು ನಾಯಕ, ಕಾರ್ಯದರ್ಶಿ ಶ್ರೀನಿವಾಸ ಗೌಡಿಗೇರಾ, ಅಲ್ಪ ಸಂಖ್ಯಾತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜೇಶ್ ಜೈನ್, ಭೂ ನ್ಯಾಯ ಮಂಡಳಿ ಸದಸ್ಯರಾದ ಅಮರೇಶ್ ನಾಯಕ ಕುಡ್ಲೂರು, ಕೆಡಿಪಿ ಸದಸ್ಯರಾದ ಬಂದು ಕಟ್ಟಿಮನಿ, ಸಾಮಾಜಿಕ ಜಾಲತಾಣ ಸಂಚಾಲಕ ಮೊನೇಶ ನಾರಾಯಣಿ ಹಾಗೂ ಮಂಡಲದ ಎಲ್ಲಾ ಎಸ್ಟಿ ಮೋರ್ಚಾ ಪದಾಧಿಕಾರಿಗಳು ಸೇರಿದಂತೆ ಇತರರಿದ್ದರು. ಮಲ್ಲೇಶ್ ನಾಯಕ ಕುಡ್ಲೂರು ಸ್ವಾಗತಿಸಿದರು. ಮರೆಪ್ಪ ನಾಯಕ ಮಲ್ಹಾರ ವಂದಿಸಿದರು.