ಬಿಜೆಪಿ ವಿರುದ್ಧ ಸಿದ್ದು ಕೆಂಡಾಮಂಡಲ

ಮೈಸೂರು:ಡಿ:18: ಕೊರೊನಾ ಆತಂಕದ ನಡುವೆ ಶಾಲಾ ಕಾಲೇಜು ಆರಂಭ ಬೇಡವೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಷ್ಟೇ ದೇಶದ ಜನ ಕೊರೊನಾದಿಂದ ಚೇತನರಿಸಿಕೊಳ್ಳುತ್ತಿದ್ದು, ಸೋಂಕು ಹರಡುವಿಕೆಯಲ್ಲಿ ಬಹಳಷ್ಟು ಇಳಿಕೆ ಇದ್ದರೆ ಮಾತ್ರ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಲಿ ಇಲ್ಲವಾದರೆ ಈ ನಿರ್ಧಾರವನ್ನು ಕೈ ಬಿಡುವುದು ಒಳಿತು. ಶಾಲಾ-ಕಾಲೇಜು ಆರಂಭವಾದರೆ ಸರ್ಕಾರಿ-ಖಾಸಗಿ ಎಂಬ ತಾರತಮ್ಯವಿಲ್ಲದೆ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು, ದೈಹಿಕ ಅಂತರವನ್ನು ಕಾಪಾಡಿಕೊಂಡು ಸರ್ಕಾರದ ನಿಯಮಾನುಸರ ನಡೆಯುವುದಾದರೆ ಮಾತ್ರ ತೆರೆಯಲಿ. ಶಾಲಾ-ಕಾಲೇಜು ಆರಂಭವಾದರು ಈ ಶೈಕ್ಷಣಿಕ ವರ್ಷದ ಅವಧಿ ಬಹಳ ಕಡಿಮೆ ಇರುವುದರಿಂದ ಇದನ್ನು ಗಮನದಲ್ಲಿಟ್ಟುಕೊಂಡು ಪಠ್ಯಕ್ರಮವನ್ನು ಕಡಿತ ಮಾಡುವುದು ಸರ್ಕಾರಕ್ಕೆ ಬಿಟ್ಟಿದ್ದು. ಅಂತಿಮವಾಗಿ ರಾಜ್ಯದ ಯಾದ ವಿದ್ಯಾರ್ಥಿಗಳಿಗೂ ಅನಾನುಕೂಲವಾಗದ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.
ಮುಂದುವರಿದು ಮಾತನಾಡಿ, ನನಗೆ ಯಾವ ಆಸೆಗಳೂ ಇಲ್ಲ. ಇನ್ನು ಚುನಾವಣೆಗೆ ನಿಲ್ಲಬೇಕಾ ಇಲ್ಲವ ಎಂಬುದನ್ನು ಸದಸ್ಯಕ್ಕೆ ತೀರ್ಮಾನಿಸಿಲ್ಲ. ಕಾರಣ ನನ್ನನ್ನು ಯಾರೂ ಯಾವ ಕ್ಷೇತ್ರಕ್ಕು ಕರೆದಿಲ್ಲ. ಚುನಾವಣಾ ಕಣಕ್ಕಿಳಿಯುವುದರ ಬಗ್ಗೆ ಇನ್ನು ಆರು ತಿಂಗಳಲ್ಲಿ ತೀರ್ಮಾನ ಮಾಡುತ್ತೇನೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ಬಳಿಕ ನಾನು ಅಲ್ಲಿಗೆ ಭೇಟಿ ನೀಡಿಲ್ಲ ಎಂಬುದು ಸತ್ಯ. ಇಂದು ಆ ಕ್ಷೇತ್ರದ ಮುಖಂಡರ ಸಭೆ ಕರೆದಿದ್ದೇನೆ. ಸಭೆಯಲ್ಲ್ಲಿ ಪರ್ಯಾಯ ನಾಯಕತ್ವ ಕೇಳಿರೋದು ಒಳ್ಳೆಯ ಬೆಳವಣಿಗೆ ಏಕೆಂದರೆ ಪ್ರತಿಭಾರಿಯೂ ನಾನೇ ಸ್ಪರ್ಧಿಸಲು ಸಾಧ್ಯವಿಲ್ಲ ನನ್ನ ಬಳಿಕ ಯಾರಾದರು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬರಬೇಕಲ್ಲವೆ. ಸಿ.ಎಂ.ಇಬ್ರಾಹಿಂ ಜೆಡಿಎಸ್‍ಗೆ ಹೋಗೋದಿಲ್ಲ ಏಕೆಂದರೆ ಅವರು ಕಾಂಗ್ರೆಸ್ನಿಂದ ಆಯ್ಕೆಯಾದ ಪರಿಷತ್ ಸದಸ್ಯರು ಹಾಗಾಗಿ ಅವರು ಕಾಂಗ್ರೆಸ್ ಪಕ್ಷ ತ್ಯಜಿಸೋ ಪ್ರಶ್ನೆಯೇ ಇಲ್ಲ.
ವಿಧಾನ ಪರಿಷತ್ ನಲ್ಲಿ ಗಲಾಟೆ ವಿಚಾರವಾಗಿ ಮಾತನಾಡಿ, ಗಲಾಟೆಗೆ ಮೂಲ ಕಾರಣಕರ್ತರೇ ಬಿಜೆಪಿಯವರು. ಬಿಜೆಪಿಯವರು ಖಳನಾಯಕರು. ಬೆಲ್ ಮುಗಿಯುವ ಮುನ್ನವೇ ಉಪಸಭಾಪತಿ ಕುರ್ಚಿ ಮೇಲೆ ಕುಳಿತಿದ್ದು ಏಕೆ. ಸಭಾಪತಿ ಇದ್ದಾಗ ಈ ರೀತಿ ಮಾಡುವುದು ಅವರಿಗೆ ಅಗೌರವ ಸಲ್ಲಿಸಿದಂತ್ತಲ್ಲವೇ…? ಎಂದು ಪ್ರಶ್ನಿಸಿದರು. ಘಟನೆಗೆ ಮೊದಲು ಪ್ರಚೋದಿಸಿದ್ದು ಯಾರು. ತದನಂತರ ನಡೆದದ್ದು ತಪ್ಪು ಅದನ್ನು ನಾನು ಸಮರ್ಥಿಸುವುದಿಲ್ಲ. ಡಿಸಿಎಂ ಸಭಾಪತಿ ಪೀಠದ ಬಳಿ ಹೋಗುವ ಪರಿಯಾದರು ಏಕಿತ್ತು. ಅಲ್ಲಿ ಅವರಿಗೇನು ಕೆಲಸ. ಮಾಧಿಸ್ವಾಮಿ ಮಾರ್ಷಲ್‍ಗೆ ಹೊಡೆಯಲು ಹೋಗಿದ್ದು ಒಬ್ಬ ಜವಾಬ್ದಾರಿಯುತ ಮಂತ್ರಿ ಮಾಡುವ ಕೆಲಸವೇ. ಈ ಘಟನೆಗೆ ಮೊದಲು ಕಾರಣ ಯಾರು ಎಂಬುದು ಗೊತ್ತಾಗಲಿ. ಬಿಜೆಪಿಗೆ ಸುಳ್ಳು ಹೇಳಿ ಅದನ್ನು ನಂಬಿಸುವವುದು ಅವರ ಕೆಲಸ. ಇಡೀ ಘಟನೆಯ ರುವಾರಿಯೇ ಬಿಜೆಪಿಯೇ ಎಂದು ಆರೋಪಿಸಿದರು.