ಬಿಜೆಪಿ ವಿರುದ್ದ ಹೋರಾಡುವ ಉಸ್ತಾದರನ್ನು ವಿಧಾನ ಸಭೆಗೆ ಕಳಿಸಿ: ಎಚ್‍ಡಿಕೆ

ಕಲಬುರಗಿ,ಜ.16- ಆಡಳಿತಾ ರೂಡ ಬಿಜೆಪಿ ಸರ್ಕಾರದ ವೈಪಲ್ಯತೆ ಸೇರಿದಂತೆ ಆ ಪಕ್ಷದ ಕೋಮುವಾದ, ದುರಾಡಳಿತದ ವಿರುದ್ಧ ಧ್ವನಿ ಎತ್ತುವ ನಾಸೀರ ಹುಸೇನ ಉಸ್ತಾದ ಅವರನ್ನು ವಿಧಾನ ಸಭೆಗೆ ಆಯ್ಕೆ ಮಾಡಿ ಕಳುಹಿಸುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರು ಕರೆ ನೀಡಿದರು.
ಮಹಾನಗರದ ಮುಸ್ಲೀಮ ಚೌಕ ಬಳಿ ಶುಕ್ರವಾರ ಸಂಜೆ ಆಯೋಜಿಸಿದ್ದ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆಯ ಭಹಿರಂಗ ಸಭೆಯ ಮುನ್ನ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಉತ್ತರ ಮತಕ್ಷೇತ್ರದ ಜನಸಾಮಾನ್ಯರ ನೋವು ನಲಿವುಗಳಿಗಾಗಿ ತಮ್ಮೊಂದಿಗೆ ಇದ್ದುಕೊಂಡು ತಮ್ಮೆಲ್ಲರ ಧ್ವನಿಯಾಗಿ ಸರ್ಕಾರದ ವಿರುದ್ಧ ಹೋರಾಡುವ ಉಸ್ತಾದ್ ಎಂಬ ಜನಸೇವಕನಿಗೆ ಮತÀ ನೀಡುವ ಮೂಲಕ ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆಗಳನ್ನು ಜಾರಿಗೆ ತರಲು ತಾವೆಲ್ಲರೂ ಐಕ್ಯತೆಯಿಂದ ಶ್ರಮಿಸುವಂತೆ ಕರೆ ನೀಡಿದರು.
ಉತ್ತರ ಮತಕ್ಷೇತ್ರದ ಪಕ್ಷದ ಅಭ್ಯರ್ಥಿ ನಾಸಿರ್ ಹುಸೇನ ಉಸ್ತಾದ ಮಾತನಾಡಿ, ನನಗೂ ಮತ್ತು ನಮ್ಮ ಪಕ್ಷದ ನಾಯಕರೆಲ್ಲರಿಗೂ ಮತದಾರರೇ ಹೈಕಮಾಂಡ್, ನಿಜವಾಗಲೂ ಕೋಮು ಶಕ್ತಿಯ ವಿರುದ್ಧ ಹೋರಾಡುವವನ್ನು ಗುರುತಿಸಿ ಮತ ನೀಡಿರಿ, ನನ್ನ ತಂದೆಯವರು 1978ರಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಿ ಕೇವಲ 350 ಮತಗಳ ಅಂತರದಿಂದ ಪರಭಾವ ಗೊಂಡರು, ಅವರು ನನಗೆ ರಾಜಿರಹಿತ ರಾಜಕರಣ ಮತ್ತು ಹೋರಾಡುವುದನ್ನು ಕಲಿಸಿಕೊಟ್ಟಿದ್ದಾರೆ. ಈ ಕ್ಷೇತ್ರದ ನಿಮ್ಮೆಲ್ಲರ ಮನಗಳ ಮಗನಂತೆ ನಿಮ್ಮ ನೋವು ಕಷ್ಟಗಳ ಪರಿಹಾರಕ್ಕೆ ಶ್ರಮಿಸುತ್ತೇನೆ ಅಲ್ಲದೇ ವಿಶೇಷವಾಗಿ ಸೋಪಿಸಂತರ ನಾಡಿನ ಪೂಜ್ಯ ಶರಣಬಸವೇಶ್ವರ ಹಾಗೂ ಖಾಜಾಬಂದಾ ನವಾಜರ ಹಿಂದೂ ಮುಸ್ಲೀಮ ಸಂಗಮದ ಪರಂಪರೆಯ ಉಳಿವಿಗಾಗಿ ಎರಡು ಸಮುದಾಯಗಳಲ್ಲಿ ಸಹೋದರತೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ನನ್ನ ಹೋರಾಟ ಮುಂದುವರೆಯಲಿದೆ. ತಮ್ಮೆಲ್ಲರ ಧ್ವನಿಯಾಗಿ ಕೆಲಸ ಮಾಡಲು ಅವಕಾಶ ನೀಡುವಂತೆ ಅವರು ಮನವಿ ಮಾಡಿದರು.
ಮಹಾನಗರದ ಪ್ರಮುಖ ರಸ್ತೆಗಳ ಮುಲಕ ರ್ಯಾಲಿ ನಡೆಸಿದ ಪಕ್ಷದ ಕಾರ್ಯಕರ್ತರು, ಮುಸ್ಲೀಮ ಚೌಕಬಳಿ ಸಂಘಟಿಸಿದ ಪಂಚರತ್ನ ರಥಯಾತ್ರೆಯ ಬಹಿರಂಗ ಸಮಾವೇಶದಲ್ಲಿ ನಿರೀಕ್ಷೆ ಮೀರಿ ಸೇರಿದ ಜನಸ್ತೋಮ ಬರಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಕ್ರಾಂತಿಗೆ ನಾಂದಿ ಹಾಡಲಿದೆ ಎಂದು ಮಾಜಿ ಸಚಿವ ಬಂಡೆಪ್ಪ ಖಾಂಶೆಂಪುರ ಅವರು ವಿಶ್ವಾಸ ವ್ಯಪ್ತಪಡಿಸಿದರು.
ಈ ರಾಜ್ಯದಲ್ಲಿ ನಾಯಕರನ್ನು ಸೃಷ್ಠಿಸುವ ಖಾರ್ಕಾನೆ ಜೆಡಿಎಸ್ ಪಕ್ಷವಾಗಿದೆ. ತೆರೆಮರೆಯಲ್ಲಿರುವ ಹಲವರಿಗೆ ವೇದಿಕೆ ಕಲ್ಪಿಸಿ ಅವರೆಲ್ಲಿಗೂ ಜನಸೇವೆ ಮಾಡಲು ಅವಕಾಶವನ್ನು ಈ ಪಕ್ಷ ಕಲ್ಪಿಸಿರುವುದು ನಾಡಿನ ಜನತೆಗೆ ತಿಳಿದಿರುವ ವಿಷಯ ಎಂದರು.
ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಸಮಯದ ಅಭವದಿಂದಾಗಿ ಈ ಸಮಾವೇಶದ ರ್ಯಾಲಿಯಲ್ಲಿ ಕೆಲವೇ ಕೆಲವು ನಿಮಿಷಗಳ ಕಾಲ ನಿಮ್ಮೊಂದಿಗಿದ್ದು, ತಮ್ಮ ತುರ್ತು ಕೆಲಸದ ಪ್ರಮುಕ್ತ ಇಲ್ಲಿಂದ ತೆರಳಿದರೂ, ಇಲ್ಲಿ ನೆರೆದ ಕಾರ್ಯಕರ್ತರು ಮತ್ತು ಮತದಾರರು ಈ ರ್ಯಾಲಿಯ ಸಮಾರೋಪ ಗೊಳ್ಳುವವರೆಗೂ ಇಲ್ಲಿಂದ ಯಾರೊಬ್ಬರು ಕದಲದಿರುವುದು ನೋಡಿದರೆ, ಬರಲಿರುವ 2023ರ ಚುನಾವಣೆಯಲ್ಲಿ ನಾಸೀರ ಹುಸೇನ ಉಸ್ತಾದ ಅವರನ್ನು ಎಂಎಲ್‍ಎ ಮಾಡುವುದು ಖಚಿತ ಎಂಬ ಸಂದೇಶವನ್ನು ನೀಡಿರುವುದು ಇಲ್ಲಿ ನೆರೆದ ಜನಸ್ತೋಮವೇ ಸಾಕ್ಷಿಯಾಗಿದೆ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪಾಲಿಕೆ ಸದಸ್ಯರು, ಹಿರಿಯ ಮುಖಂಡರು ತಮ್ಮ ಅನಿಸಿಕೆಗಳನ್ನು ಮಾದ್ಯಮದ ಮುಂದೆ ವ್ಯಕ್ತಪಡಿಸಿರು.
ಸಮಾವೇಶದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಸುರೇಶ ಮಹಾಗಾಂವಕರ, ಕಷ್ಣರೆಡ್ಡಿ, ಮಹೇಶ್ವರಿ ವಾಲಿ, ಸಂಜೀವ ಯಾಕಾಪೂರ, ಮುಖಂಡರಾದ ಅಫಜಲ ಮೊಹ್ಮದ, ನ್ಯಾಯವಾದಿ ಮಜರಹುಸೇನ, ಮೌಲಾನಾ ವಿಖರ ಅಶ್ರಫಿ ಸಹಾಬ, ಸುರೇಷ ಮಹಾಗಾಂವ, ಉಸ್ಮಾನ ಗುತ್ತೇದಾರ, ಗಾಲಿಬ ಹಶ್ಮಿ, ಅಲೀಮ ಪಟೇಲ ಸಜೀದ ಕಲ್ಯಾನ, ಅಷ್ಪಾಕ ಚುಲಬುಲ, ಸಿದ್ದಿಖಿ, ಜಾವೇದ ಆರ್.ಟಿ.ಓ, ನಸೀರ ಮೌಲಾನಾ, ಅಲೀಮ ಇನಾಮದಾರ, ಮೊಹ್ಮದ ಇಬ್ರಾಹಿಂ, ಫಯಾಜ ಅಹ್ಮದ, ಅದನಾನ ಖಾನ, ಶಿರಾಜ ಶಾಬ್ದಿ, ಮತ್ತು ಶಿವಕುಮಾರ ನಾಟಿಕಾರ, ದೇವೇಗೌಡ ತೆಲ್ಲೂರ ಅಲೀಮ ಪಟೇಲ್, ಶಂಕರ ಕಟ್ಟಿಸಂಗಾವಿ, ಮನೋಹ ಪೊದ್ದಾರ, ಬಸವರಾಜ ಬಿರಬಿಟ್ಟಿ, ಶಮೀರ ಬಾಗವಾನ, ಏಸುಮಿತ್ರ, ಮಹಾನಂದ ಪಡಶೆಟ್ಟಿ, ಮಹೆಮೂದ ಖುರೇಷಿ, ಮುಶಾಕ ಕೋರವಾರ, ವೆಲಸನ್ ಕುಮಾರ, ಹಣಮಂತ ಸಲಗುಂದಿ, ಅಬ್ದುಲ ರೌಫ, ಶರಣಗೌಡ ಹೊಸಮನಿ ಸೇರಿದಂತೆ ಹಲವರು ಭಾಗವಹಿಸಿದ್ದರು.