ಬಿಜೆಪಿ ವಿಜಯ ಸಂಕಲ್ಪ ಯಾತ್ರೆ
 ಬಳ್ಳಾರಿಯಲ್ಲಿ ಭರ್ಜರಿ ರೋಡ್ ಷೋ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.15: ನಗರದಲ್ಲಿ ನಿನ್ನೆ ಸಂಜೆ ಗ್ರಾಮೀಣ ಕ್ಷೇತ್ರದ ಕೌಲ್ ಬಜಾರ್ ನಲ್ಲಿ ಮತ್ತು ನಗರ ಕ್ಷೇತ್ರದ ಬೆಂಗಳೂರು ರಸ್ತೆಯಲ್ಲಿ ಬಿಜೆಪಿಯ ವಿಜಯ ಸಂಕಲ್ಪ‌ ಯಾತ್ರೆಯ ಭರ್ಜರಿ ರೋಡ್ ಷೋ ನಡೆಯಿತು. ಇದು ಒಂದು ರೀತಿ ಚುನಾವಣೆಯ ಮುನ್ನವೇ ವಿಜಯೋತ್ಸವದ ಮಾದರಿಯಲ್ಲಿತ್ತು ಎನ್ನಬಹುದು.
ಕಂಪ್ಲಿ ಕ್ಷೇತ್ರದಿಂದ ಗ್ರಾಮಿಣ ಕ್ಷೇತ್ರಕ್ಕೆ ಬಂದ ವಿಜಯ ಸಂಕಲ್ಪ ಯಾತ್ರೆಯ ರಥ ಟಿಬಿ ಸ್ಯಾನಿಟೋರಿಯಂ ಸರ್ಕಲ್ ನಿಂದ ಕವಬಲ್ ಬಜಾರ್ ನ‌ಪ್ರಮುಖ ರಸ್ತೆ ಮೂಲಕ‌ಏಳು ಮಕ್ಕಳ ತಾಯಿ ದೇವಸ್ಥಾನದವರಗೆ ಸಾಗಿ ಬಂತು.
ಇದರಲ್ಲಿ ಅಸ್ಸಾಂ ಮುಖ್ಯ ಮಂತ್ರಿ ಡಾ.ಹಿಮಂತ್ ಬಿಸ್ವಾ ಶರ್ಮ, ಸಚಿವ ಶ್ರೀರಾಮುಲು ಮೊದಲಾದವರು ಇದ್ದರು.
ನಗರ ಕ್ಷೇತ್ರದಲ್ಲಿನ ಯಾತ್ರೆಯು ಏಳ್ಳು ಮಕ್ಕಳ ತಾಯಿ ದೇವಸ್ಥಾನದಿಂದ ವಾಲ್ಮೀಕಿ ವೃತ್ತದ ಮಾರ್ಗವಾಗಿ ದುರ್ಗಮ್ಮ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ. ಅಲ್ಲಿಂದ ಬೆಂಗಳೂರು ಮಾರ್ಗವಾಗಿ ಸಾಗುತ್ತಿದ್ದಂತೆ ಪಟಾಕಿ ಸಿಡಿಸಿ, ಅಲ್ಲಲ್ಲಿ ಜೆಸಿಬಿಗಳನ್ನು ನಿಲ್ಲಿಸಿ‌ರಥದಲ್ಲಿನ ಗಣ್ಯರಿಗೆ ಹೂ ಮಳೆಗೆರೆಯುವ ಮೂಲಕ ಸ್ವಾಗತಿಸಲಾಯಿತು.
ಒಂದು‌ಕಡೆ ಡಿಜೆ ಸೌಂಡ್, ಮತ್ತೊಂದು‌ಕಡೆ ವಿವಿಧ ಜನಪದ ಕಲಾ ತಂಡಗಳ ನೃತ್ಯ, ಕುಣಿತ, ವಾದನಗಳ ಮೆರಗು ಯಾತ್ರೆಯಲ್ಲಿ ಕಂಡು ಬಂತು.
ರಥದಲ್ಲಿ ಪಕ್ಷದ ರಾಜ್ಯ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್, ಸಚಿವ ಶ್ರೀರಾಮುಲು,ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಜಿಲ್ಲಾ ಅಧ್ಯಕ್ಷ ಮುರಹರಗೌಡ, ಜವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ ಮೊದಾಲಾದವರು ಪಾಲ್ಗೊಂಡಿದ್ದರು.
ಯಾತ್ರೆ ಎಪಿಎಂಸಿ ಸರ್ಕಲ್ ವರೆಗೆ ಸಾಗಿ ಬಂತು.
ಇದರಲ್ಲಿದ್ದ ಮುಖಂಡರು ನ್ರ ಕ್ಷೇತ್ರದಿಂದ ಮತ್ತೊಮ್ಮೆ ಶಾಸಕ ಸೋಮಶೇಖರ ರೆಡ್ಡಿ ಅವರನ್ನು ಭರ್ಜರಿ ಮತಗಳ ಅಂತರದಿಂದ ಗೆಲುಸ ಬೇಕು ಎಂದು ಮನವಿ‌ ಮಾಡಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೆ. ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿ ಎಂವುದರ ಬಗ್ಗೆ ವಿವರಿಸಿದರು. ಅಲ್ಲದೆ ಈವರಗಿನ ಕೇಂದ್ರ,  ರಾಜ್ಯ ಸರಗಕಾರದ ಯೋಜನೆಗಳ ಬಗ್ಗೆ ವಿವರಿಸಿದರು.