
ಶಹಾಪುರ :ಮಾ.10: ಬಿಜೆಪಿ ಪಕ್ಷ ರಾಜ್ಯಾದ್ಯಂತ ವಿಜಯ ಸಂಕಲ್ಪ ಯಾತ್ರೆ ಕೈಗೊಂಡಿದ್ದು ಇಂದು ಶಹಾಪುರ ನಗರದಲ್ಲಿ ಯಾತ್ರೆ ಅದ್ದೂರಿಯಾಗಿ ನಡೆಯಿತು.ಸಚಿವರಾದ ಶ್ರೀರಾಮುಲು,ಮಾಜಿ ಶಾಸಕರಾದ ಗುರುಪಾಟೀಲ ಶಿರವಾಳ, ಅಮ್ಮೀನರೆಡ್ಡಿ ಯಾಳಗಿ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ರಾಷ್ಟ್ರ ಮತ್ತು ರಾಜ್ಯದ ಮುಖಂಡರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.ಅಪಾರ ಪ್ರಮಾಣದ ಜನಸ್ತೋಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದು.
ಚರಬಸವೇಶ್ವರ ಸಂಸ್ಥಾನ ಮಠದಲ್ಲಿ ಪತ್ರಿಕಾಗೋಷ್ಟಿಗೋಷ್ಠಿ ನಡೆಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗ ಸಿ ಟಿ ರವಿ ಮಾತನಾಡಿ, ಚುನಾವಣಾ ಆಯೋಗವು ಅಧಿಸೂಚನೆ ದಿನಾಂಕ ಪ್ರಕಟಿಸಿದ ತಕ್ಷಣವೇ ಎಲ್ಲಾ 224 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. ರಾಜ್ಯದಲ್ಲಿ ಅಭಿವೃದ್ಧಿ ಪರ್ವವನ್ನೆ ಹರಿಸಿದ್ದು ಅದರ ಆಧಾರದ ಮೇಲೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದ್ದು 150 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದರು.
ಸರಕಾರವು ರೈತರ ಖಾತೆಗೆ 10,000 ರೂಂ. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 54 ಲಕ್ಷ ರೈತರ ಖಾತೆಗೆ ಹಣ ಜಮಾ ಮಾಡಲಾಗಿದೆ. 5 ಲಕ್ಷ ರೂಪಾಯಿಯಂತೆ ರೈತರಿಗೆ ಬಡ್ಡಿ ರಹಿತ ರೈತರಿಗೆ ಸಾಲ ಕೊಟ್ಟಿದ್ದೇವೆ.ಭೂ ರೈತ ಕೂಲಿಕಾರ್ಮಿಕರಿಗೆ ಮಾಸಿಕ ಸಾವಿರ ರೂಪಾಯಿ ಮುಂದಿನ ದಿನಗಳಲ್ಲಿ ಕೊಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ಹೆಚ್ಚಳ ಮಾಡಲಾಗಿದೆ. 475 ಕಂದಾಯ ಕೇಂದ್ರಗಳನ್ನಾಗಿ ರೂಪಿಸಿ ಪ್ರಧಾನಿಯವರು ಅವರಿಗೆ ಹಕ್ಕು ಪತ್ರಗಳನ್ನು ವಿತರಿಸಿದ್ದಾರೆ. ಯಾದಗಿರಿ ರಾಯಚೂರು ಮಾರ್ಗವಾಗಿ ಗ್ರೀನ್ಫೀಲ್ಡ್ ಚೆನ್ನೈನಿಂದ ಸೂರತ್ ವರೆಗೆ ದಶಪಥ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ದೇಶಾದ್ಯಂತ ಕೊರೋನಾ ಸಂದರ್ಭದಲ್ಲಿ ಉಚಿತವಾಗಿ 140 ಕೋಟಿ ಜನರಿಗೆ ವ್ಯಾಕ್ಸಿನ್ ಗಳನ್ನು ಹಾಕಿಸಲಾಗಿದೆ. ಕಲ್ಯಾಣ ಕರ್ನಾಟಕಕ್ಕೆ 5000 ಕೋಟಿ ಮೀಸಲಿಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ಸನ್ನು ಟೀಕಿಸಿದ ಸಿಟಿ ರವಿ, ಸಿದ್ದರಾಮಯ್ಯನವರು ಅಧಿಕಾರದಲ್ಲಿ ಒಂದೇ ಕೋಮಿನ ಜನರಿಗೆ ಶಾದಿಭಾಗ್ಯ ಎನ್ನುವ ಯೋಜನೆಯನ್ನು ಜಾರಿಗೆ ತಂದಿದ್ದರು. ನಮ್ಮ ಸರಕಾರ ಜಾತಿ ಧರ್ಮವನ್ನು ಲೆಕ್ಕಿಸದೆ ಎಲ್ಲರನ್ನೂ ಒಟ್ಟಿಗೆ ಗುರುತಿಸಿ ಎಲ್ಲಾ ಯೋಜನೆಗಳನ್ನು ಎಲ್ಲಾ ಧರ್ಮದವರಿಗೆ ನೀಡಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದವರು,ಗ್ಯಾರಂಟಿ ಕಾರ್ಡ್ ಅಲ್ಲ. ಅದು ಫಾಕ್ಸ್ ಕಾರ್ಡ್ ಆಗಿದ್ದು,ರಾಜಸ್ಥಾನದಲ್ಲಿ ನೀಡಿದ ಭರವಸೆಯಂತೆ ರೈತರ ಸಾಲವನ್ನು ಕಾಂಗ್ರೆಸ್ ಪಕ್ಷ 4 ವರ್ಷವಾದರೂ ಯಾಕೆ ಮನ್ನಾ ಮಾಡಿಲ್ಲ. ಹಿಮಾಚಲದಲ್ಲಿ ಅಧಿಕಾರಕ್ಕೆ ಬಂದ ತಕ್ಷಣವೇ ಡೀಸೆಲ್ ಪೆಟ್ರೋಲ್ ಬೆಲೆ ಇಳಿಸುತ್ತೇವೆ ಎಂದವರು ಯಾಕೆ ಇಳಿಕೆ ಮಾಡಿಲ್ಲ ಎಂದು ಕಾಂಗ್ರೆಸ್ ಪಕ್ಷದವನ್ನು ಟೀಕಿಸಿದರು. ಚುನಾವಣೆಗಾಗಿ ಫಾಕ್ಸ್ ಕಾರ್ಡ್ ಕೊಟ್ಟಿದ್ದಾರೆ.ಬಿಜೆಪಿ ಪಕ್ಷದಲ್ಲಿ ನಿಯತ್ತು ಮತ್ತು ನೇತೃತ್ವ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಎರಡು ಇಲ್ಲ ಎಂದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಸ್ಥಳದಲ್ಲಿ ಕುಕ್ಕರ್ ಬ್ಲಾಸ್ಟ್ ಆಗುವುದು ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ರವರನ್ನು ಟೀಸಿದರು.
ವಿದೇಶದಲ್ಲಿ ಹೋಗಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿಯವರು ಸಂವಿಧಾನಕ್ಕೆ ಅವಮಾನ ಮಾಡಿದ್ದು, ಭಾರತ ದೇಶದಲ್ಲಿ ಪ್ರಜಾಪ್ರಭುತ್ವ ಇಲ್ಲ ಎಂದು ಮೂದಲಿಸಿದ್ದಾರೆ. ತಕ್ಷಣವೇ ರಾಹುಲ್ ಗಾಂಧಿಯವರು ರಾಷ್ಟ್ರದ ಜನತೆಯಲ್ಲಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ, ಸಂಸದರಾದ ಅಂಬರೀಶ ನಾಯಕ, ಶಾಸಕರಾದ ರಾಜುಗೌಡ, ವಿಧಾನ ಪರಿಷತ ಸದಸ್ಯರಾದ ಬಿಜೆಪಿ ಪಾಟೀಲ್, ಬಿಜೆಪಿ ಪ್ರಕೋಸ್ಟಾದ ಜಿಲ್ಲಾ ಸಂಚಾಲಕರಾದ ವೀರಭದ್ರಪ್ಪಗೌಡ, ಡಾ. ಚಂದ್ರಶೇಖರ ಸುಬೇದಾರ, ಪ್ರಧಾನ ಕಾರ್ಯದರ್ಶಿಗಳಾದ ಗುರುಕಾಮ,
ತಾಲೂಕು ಮಂಡಲ ಅಧ್ಯಕ್ಷರಾದ ರಾಜುಗೌಡ ಉಕ್ಕಿನಾಳ್
, ಜಿಲ್ಲಾ ಪ್ರಭಾರಿಗಳಾದ ಅಮರನಾಥ ಪಾಟೀಲ್, ಎಸ್ ಸಿ ಪಾಟೀಲ್, ಮಲ್ಲಿಕಾರ್ಜುನಗೌಡ ಉಕ್ಕಿನಾಳ ಸೇರಿದಂತೆ ಇತರರು ಇದ್ದರು.
ಚಿಕ್ಕಮಗಳೂರಿನಲ್ಲಿ ಬಿಜೆಪಿ ಪಕ್ಷದಿಂದ ಸೀರೆ ಹಂಚಿಕೆಯಾಗಿತ್ತು ಎಂದು ಪತ್ರಿಕರ್ತರ ಪ್ರಶ್ನೆಗೆ ಉತ್ತರಿಸಿದ ಸಿಟಿ ರವಿ ಇದು ನಮ್ಮ ಪಕ್ಷಕ್ಕೆ ಸಂಬಂಧಿಸಿದಲ್ಲ ಎಂದು ಜಾರಿಕೊಂಡರು. ಮಾಡಾಳ್ ವಿರೂಪಾಕ್ಷಪ್ಪನವರ ಜಾಮೀನು ಪಡೆದ ಸಂಭ್ರಮಿಸಿದ ವಿರೂಪಾಕ್ಷಪ್ಪನವರು ಯಾವ ಪುರುಷಾರ್ಥಕ್ಕೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಇದು ಕಾಂಗ್ರೆಸ್ನವರು ಸಂಪ್ರದಾಯ ಎಂದು ಹೇಳಿದರು.