
(ಸಂಜೆವಾಣಿ ವಾರ್ತೆ)
ನವಲಗುಂದಮ,ಸೆ9 : ರೈತ ವಿರೋಧಿ ನೀತಿ, ಜನ ವಿರೋಧಿ ನಿಲುವಿನ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ರೈತಮೋರ್ಚಾ ವತಿಯಿಂದ ನೂರಾರು ಸಂಖ್ಯೆಯಲ್ಲಿ ರೈತರು ಗಣೇಶದೇವಸ್ಥಾನದಿಂದ ಮೆರವಣಿಗೆ ಮೂಲಕ ತಹಶೀಲ್ದಾರ ಕಚೇರಿಗೆ ತೆರಳಿ ತಹಶೀಲ್ದಾರ್ ಸುಧೀರ್ ಸಾಹುಕಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಬಸವರಾಜ್ ಕುಂದಗೋಳ ಮಠ ಮಾತನಾಡಿ ಈ ಹಿಂದಿನ ಬಿಜೆಪಿ ಸರಕಾರದಲ್ಲಿ ಜಾರಿಯಲ್ಲಿದ್ದ ಯೋಜನೆಗಳಾದ ವಾರ್ಷಿಕ 4000 ರೂ.ಗಳ ಕಿಸಾನ್ ಸಮ್ಮಾನ ನಿಧಿ, ರೈತ ವಿದ್ಯಾನಿಧಿ, ಭೂ ಸಿರಿ ಯೋಜನೆ, ಮಹಿಳಾ ಕೃಷಿ ಕಾರ್ಮಿಕರಿಗೆ ನೀಡುವ ಮಾಸಿಕ ರೂ.500 ಗಳ ಶ್ರಮಶಕ್ತಿ ಯೋಜನೆ, ರೈತ ಉತ್ಪನ್ನಗಳ ರಪ್ತುಗಳ ಉತ್ತೇಜನದ ರೈತ ಸಂಪದ ಯೋಜನೆ, ಜಿಲ್ಲೆಗೊಂದು ಗೋಶಾಲೆ ಯೋಜನೆ, ಎಪಿಎಂಸಿ ಕಾಯ್ದೆ, ಕೃಷಿ ಭೂಮಿ ಮಾರಾಟ ಕಾಯ್ದೆ, ಕ್ಷಿರ ಸಮೃದ್ದಿ ಸಹಕಾರಿ ಬ್ಯಾಂಕ್ ಸ್ಥಾಪಿಸುವ ಯೋಜನೆ ಸೇರಿದಂತೆ ಇನ್ನೂ ಹಲವಾರು ಯೋಜನೆಗಳನ್ನು ಕೂಡಲೇ ಮರು ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಷಣ್ಮುಖ ಗುರಿಕಾರ, ಎಸ್ ಬಿ ದಾನಪ್ಪಗೌಡ್ರ, ಅಂದಾನಯ್ಯ ಹಿರೇಮಠ, ಮುತ್ತಣ್ಣ ಮನಮಿ, ಸಿದ್ದಣ್ಣ ಕಿಟಗೇರಿ, ಬಸಣ್ಣ ಬೆಳವಣಕಿ, ಶಂಕರಗೌಡ ರಾಯನಗೌಡ್ರ, ಮಂಜುನಾಥ್ ಇಮ್ಮಡಿ, ಈರಣ್ಣ ಹಸಬಿ ದೇವರಾಜ್ ದಾಡಿಬಾಯಿ, ಅಣ್ಣಪ್ಪ ಬಾಗಿ, ಮಲ್ಲಿಕಾರ್ಜುನ ಸಂಗನಗೌಡ್ರ, ಮಹಾಂತೇಶ್ ಕಲಾಲ್, ಬಸವರಾಜ್ ಕಟ್ಟಿಮನಿ, ಎಸ್ ವಿ ಮುದಿಗೌಡ್ರ, ಶರಣು ಯಮನೂರ, ಬಸವರಾಜ್ ಕಾತರಕಿ, ಮಲ್ಲಿಕಾರ್ಜುನ ಹೊಳೆಯನ್ನವರ, ಪ್ರಭು ಇಬ್ರಾಹಿಂಪುರ, ಆನಂದ ಜಕ್ಕನಗೌಡ್ರ ಸೇರಿದಂತೆ ಪಕ್ಷದ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು, ಪಕ್ಷದ ಹಿರಿಯರು, ಕಾರ್ಯಕರ್ತರು ಮತ್ತು ರೈತರು ಭಾಗವಹಿದ್ದರು.