ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಓರ್ವಾಯಿ ಶಶಿಧರಗೌಡ ನಿಧನ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಡಿ.21: ಬಿಜೆಪಿಯ ರೈತ ಮೋರ್ಚಾದ ಜಿಲ್ಲಾ ಕಾರ್ಯದರ್ಶಿಯಾಗಿದ್ದ ಕುರುಗೋಡು ತಾಲೂಕಿನ ಓರ್ವಾಯಿ ಗ್ರಾಮದ ಜಿ.ಶಶಿಧರಗೌಡ ನಿನ್ನೆ ನಿನ್ನೆ ನಿಧನರಾಗಿದ್ದಾರೆ.
ಕಂಪ್ಲಿ ನಿವಾಸಿಯಾಗಿದ್ದ ಅವರು ಅನಾರೋಗ್ಯದಿಂದ ಸಾವನ್ನಪ್ಪಿದ್ದು. 56 ವರ್ಷದ ಅವರು ಪತ್ನಿ, ಪುತ್ರಿ, ಪುತ್ರನನ್ನು ಆಗಲಿದ್ದಾರೆ. ಅವರ ಅಂತ್ಯ ಕ್ರಿಯೆ ಇಂದು ಓರ್ವಾಯಿ ಗ್ರಾಮದಲ್ಲಿ ಇಂದು ಮಧ್ಯಾಹ್ನ ನೆರವೇರಿತು.
 ಸಂತಾಪ:
ಶಶಿಧರಗೌಡ ಅವರ ನಿಧನಕ್ಕೆ ಕಂಪ್ಲಿ ಮಾಜಿ ಶಾಸಕ ಟಿ.ಹೆಚ್.ಸುರೇಶ್ ಬಾಬು, ಬಿಜೆಪಿ ರೈತ ಮೋರ್ಚಾದ ಮುಖಂಡರಾದ ಎಸ್.ಗುರುಲಿಂಗನಗೌಡ, ಮದಿರೆ ಕುಮಾರಸ್ವಾಮಿ, ಜವಳಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ, ಜಿಲ್ಲಾ ಅಧ್ಯಕ್ಷ. ಗೋನಾಳ್ ಮುರಹರಗೌಡ ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.