ಬಿಜೆಪಿ ರೈತ ಮೋರ್ಚಾದಿಂದ ರಕ್ತದಾನ

ದಾವಣಗೆರೆ. ಮೇ.೨೯; ಪ್ರಧಾನಿ ನರೇಂದ್ರ ಮೋದಿಯವರ ಏಳು ವರ್ಷ ಆಡಳಿತ ಪೂರ್ಣಗೊಳಿಸಿದ  ಹಿನ್ನೆಲೆಯಲ್ಲಿ   ಸೇವಾ ಕಾರ್ಯವಾದ  ರಕ್ತದಾನ ಶಿಬಿರವನ್ನು ನಿಜಲಿಂಗಪ್ಪ ಬಡಾವಣೆಯ ಲೈಫ್-ಲೈನ್ ರಕ್ತನಿಧಿ ಭಂಡಾರದಲ್ಲಿ  ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ   ನಾಗರಾಜ್ ಲೋಕಿಕೆರೆ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಉಪಾಧ್ಯಕ್ಷ ವೀರೇಶ ಹೊನ್ನೂರು, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬಾತಿ, ಕಾರ್ಯದರ್ಶಿ ಶಿವಪ್ರಕಾಶ್,  ಶ್ರೀನಿವಾಸ್ ಎಸ್ ಪಿ  ಇದ್ದರು.ನಾಳೆ ಪ್ರಧಾನಿ ಮೊದಿಯವರು ಎರಡನೇ ಅವಧಿಯ ಎರಡನೇ ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಬಡವರು,ನಿರ್ಗತಿಕರಿಗೆ ಉಪಹಾರ ವಿತರಣೆ ಮಾಡಲಾಯಿತು.