ಬಿಜೆಪಿ ರೈತ ಮೋರ್ಚಾದಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರ

ಬಳ್ಳಾರಿ ಜ 28 : ನಗರದ ಹವಾಂಭಾವಿ ಪ್ರದೇಶದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 72ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜರೋಹಣದ ಜೊತೆಗೆ ಸ್ಥಳೀಯ ಜನರಿಗೆ ಬಿಜೆಪಿಯ ನಗರದ ರೈತ ಮೋರ್ಚಾ ಅಧ್ಯಕ್ಷ ಟಿ.ಸತ್ಯನಾರಾಯಣ ನೇತೃತ್ವದಲ್ಲಿ ಉಚಿತ ನೇತ್ರಾ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಶಿಬಿರಕ್ಕೆ ನಗರ ಶಾಸಕ ಗಾಲಿ.ಸೋಮಶೇಖರ್‍ರೆಡ್ಡಿ ಚಾಲನೆ ನೀಡಿ, ಇಂತಹ ಜನೋಪಯೋಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದ ಸತ್ಯನಾರಾಯಣ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಿಬಿರದಲ್ಲಿ ಪಾಲ್ಗೊಂಡಿದ್ದ 80 ಜನರಿಗೆ ಉಚಿತ ನೇತ್ರಾ ಶಸ್ತ್ರ ಚಿಕಿತ್ಸೆಯ ಖರ್ಚನ್ನು ಭರಿಸುವುದಾಗಿ ಭರವಸೆ ನೀಡಿದರು.
ಶಿಬಿರದಲ್ಲಿ 150ಕ್ಕೂ ಹೆಚ್ಚು ಜನ ತಮ್ಮ ನೇತ್ರಾಗಳನ್ನು ಪರೀಕ್ಷಿಸಿಕೊಂಡರು. ಶಾಲೆಯ ಮುಖ್ಯ ಗುರುಗಳು ನಿಂಗಪ್ಪ, ಸ್ಥಳೀಯರಾದ ನೇತಿ ರಘುರಾಮ್, ಎಸ್.ಡಿ.ಎಂ.ಸಿ ಅಧ್ಯಕ್ಷ ಟಿ.ನಾಗಪ್ಪ, ಸುರೇಶ್ ಕುಮಾರ್, ಬಿ.ಜೆ.ಪಿ. ಮುಖಂಡರಾದ ವೀರಶೇಖರ್‍ರೆಡ್ಡಿ, ಮೋತ್ಕರ್ ಶ್ರೀನಿವಾಸ್ ಹಾಗೇ ಬುಡಾ ಮಾಜಿ ಅಧ್ಯಕ್ಷ ದಮ್ಮೂರು ಶೇಖರ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗಣಪಾಲ್ ಐನಾಥರೆಡ್ಡಿ ಮೊದಲಾದವರು ಆಗಮಿಸಿದ್ದರು. ಚಂದ್ರಶೇಖರ್ ಹಾಗೂ ದಿಲೀಪ್ ಇವರು ನೇತ್ರ ತಪಾಸಣೆ ಮಾಡಿದರು.