ಬಿಜೆಪಿ ಯುವ ಮೋರ್ಚಾ – ಹುತಾತ್ಮ ದಿನಾಚರಣೆ

ರಾಯಚೂರು.ಮಾ.೨೪- ಕ್ರಾಂತಿಕಾರಿ ದೇಶಭಕ್ತರಾದ ಭಗತ್ ಸಿಂಗ್, ರಾಜಗುರು, ಸುಖದೇವ್ ಗಲ್ಲಿಗೇರಿದ ಮಾ.೨೩ ದಿನವನ್ನು ಹುತಾತ್ಮ ದಿನವನ್ನಾಗಿ ನಿನ್ನೆ ಬಿಜೆಪಿ ಯುವ ಮೋರ್ಚಾ ಪಂಜಿನ ಮೆರವಣಿಗೆ ನಡೆಸಿತು.
ಡಾ.ಬಿ.ಆರ್.ಅಂಬೇಡ್ಕರ್ ಭಗತ್ ಸಿಂಗ್ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮೂವರು ಕ್ರಾಂತಿಕಾರರನ್ನು ಸ್ಮರಿಸಲಾಯಿತು. ನಗರ ಯುವ ಮೋರ್ಚಾದ ಅಧ್ಯಕ್ಷರಾದ ಸಂಜೀವ ರೆಡ್ಡಿ ಅವರ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು. ಈ ಮೆರವಣಿಗೆಯಲ್ಲಿ ಕರ್ನಾಟಕ ಬಿಜೆಪಿ ಉಪಾಧ್ಯಕ್ಷರಾದ ಶಂಕರಪ್ಪ ಅವರು, ನಗರ ಪ್ರಧಾನ ಕಾರ್ಯದರ್ಶಿಗಳು ಚಂದ್ರ ಶೇಖರ್ ಮತ್ತು ಪರ್ದಿಪ್ ಸಾನಬಾಳ್, ರಾಯಚೂರು ಬಿಜೆಪಿ ನಗರ ಅಧ್ಯಕ್ಷರು ಬಿ.ಗೋವಿಂದ, ಯುವ ಮುಖಂಡರಾದ ಮಹೇಂದ್ರ ರೆಡ್ಡಿ, ರಾಯಚೂರು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರು ಜಂಬಣ್ಣ ಮಂದಕಲ್, ಉಪಾಧ್ಯಕ್ಷರು ಮತ್ತು ನಗರ ಪ್ರಭಾರಿಗಳು ರಾಮನ ಗೌಡ, ಪ್ರಧಾನ ಕಾರ್ಯದರ್ಶಿ ಮಹೇಶ್ ಕಲ್ಲೋರ್, ರಾಯಚೂರು ನಗರ ಯುವ ಮೋರ್ಚಾ ಉಪಾಧ್ಯಕ್ಷರು ರಾಹುಲ್ ಜಾಲ್ದಾರ್, ಸಂಜೂ ಸಾಮೂಲ್, ಅನಿಲ್ ಭಂಡಾರಿ, ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳು ಪಾಪುರಾವ್ ಮತ್ತು ಕಾರ್ತಿಕ್ ರೆಡ್ಡಿ, ಖಜಾಂಚಿ ಗೌತಮ್ ಜೈನ್ ಹಾಗೂ ಯುವ ಮೋರ್ಚಾದ ಕಾರ್ಯದರ್ಶಿಗಳು ವೆಂಕಟೇಶ್ ಮಾಸಗಲ್ ಮತ್ತು ಬಿಜೆಪಿ ಕಾರ್ಯಕರ್ಣಿ ಸದ್ಯಸರು ಭಾರತೇಶ್, ವಿದೇಶ್ವರ್ ಕ್ಯೆಲಣಕಾರಿ ಹಾಗೂ ಬಿಜೆಪಿ ಯುವ ಕಾರ್ಯಕರ್ತರು ಭಾಗವಹಿಸಿದ್ದರು.