ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷರಿಂದ ಮಹಾತ್ಮರಿಗೆ ಮಾಲಾರ್ಪಣೆ

ರಾಯಚೂರು.ಜ.೮.ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾದ ರಾಜ್ಯಾಧ್ಯಕ್ಷ ಸಂದೀಪ್ ಕುಮಾರ್ ಕೆಸಿ ಅವರು ನಗರಕ್ಕೆ ಭೇಟಿ ನೀಡಿ ಮಹಾತ್ಮರ ವೃತ್ತಗಳಿಗೆ ಮಾಲಾರ್ಪಣೆ ಮಾಡಿದರು.
ಇಂದು ಭಾರತೀಯ ಜನತಾ ಪಕ್ಷದ ವತಿಯಿಂದ ಯುವ ಮೋರ್ಚಾ ರಾಜ್ಯಾಧ್ಯಕ್ಷರನ್ನು ನಗರ ಘಟಕದ ವತಿಯಿಂದ ಇವರನ್ನು ಬೈಪಾಸ್ ರಸ್ತೆಯಿಂದ ಬೃಹತ್ ಬೈಕ್ ರ್ಯಾಲಿ ಮೂಲಕ ಕರೆತಂದು ವಾಲ್ಮೀಕಿ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಎಲ್ಲಾ ಮಹಾತ್ಮರ ವೃತ್ತಗಳಿಗೆ ಮಾಲಾರ್ಪಣೆ ಮಾಡಿ ಜಿಲ್ಲಾ ಕಾರ್ಯಾಲಯಕ್ಕೆ ತೆರಳಿದರು.
ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಜಂಬಣ್ಣ ಮಂದಕಲ್,
ರೈತ ನಗರ ರಾಜ್ಯ ಕಾರ್ಯದರ್ಶಿಗಳದ ಅಮರೇಶ್ , ಲಿಂಗಣ್ಣ ಪೋತ್ನಾಳ್, ನಗರಾಧ್ಯಕ್ಷ ಸಂಜು ರೆಡ್ಡಿ, ಮಂಜುನಾಥ್ ಪಾಟೀಲ್, ರಾಹುಲ್ ಜಲ್ದಾರ್, ಅನಿಲ್ ಭಂಡಾರಿ, ಸೂರಜ್ ವೆಂಕಟೇಶ, ದೇವರಾಜ್ ಗೌಡ ಸೇರಿದಂತೆ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.