ಬಿಜೆಪಿ ಯುವ ಮೋರ್ಚಾ: ಪರಿಸರ ದಿನಾಚರಣೆ


ದೇವದುರ್ಗ.ಜೂ.೦೬-ವಿಶ್ವ ಪರಿಸರ ದಿನಾಚರಣೆಯಂಗವಾಗಿ ತಾಲೂಕಾ ಬಿಜೆಪಿ ಯುವ ಮೋರ್ಚಾವತಿಯಿಂದ ಪಟ್ಟಣದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಕೆಎಸ್‌ಎನ್ ಅನ್ನದಾಸೋಹ ಕೇಂದ್ರದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಜಂಬಣ್ಣ ನಿಲಗಲ್, ಯುವ ಮೋರ್ಚಾಧ್ಯಕ್ಷ ಗೋಪಾಲಕೃಷ್ಣ ವಿ.ಮೇಟಿ ಅವರು ಸಸಿಗಳನ್ನು ನೆಟ್ಟರು.
ಬಿಜೆಪಿಯ ಮುಖಂಡರಾದ ಪ್ರಕಾಶ ಪಾಟೀಲ್ ಜೇರಬಂಡಿ, ನಗರಾಧ್ಯಕ್ಷ ಜಹೀರಪಾಶಾ ಇಡಪನೂರು, ಬಸನಗೌಡ ವೆಂಕಟಾಪೂರು, ಶಿವಕುಮಾರ ಬಳೆ, ಚಂದ್ರಶೇಖರ ಕುಂಬಾರ, ಬಸವರಾಜ ಮಡಿವಾಳ ಕೊಪ್ಪರ, ವಿನೋದ ನಾಯಕ ಹಿರೇಬೂದೂರು, ತಮ್ಮಣ್ಣ ದೊಂಡಂಬಳಿ, ಬಸವರಾಜ ಅಕ್ಕರಕಿ, ಮಲ್ಲಿಕಾರ್ಜುನ ಹಿರೇಬೂದೂರು, ಚನ್ನಬಸವ ಮ್ಯಾಕಲದೊಡ್ಡಿ, ಆನಂದ ಪಾಟೀಲ್ ನವಿಲಗುಡ್ಡ, ಶೇಖರ ಚಿಂಚೋಡಿ, ಮಹ್ಮದ ರಫಿ, ಪ್ರಕಾಶ ಮಸರಕಲ್ ಸೇರಿದಂತೆ ಹಲವರಿದ್ದರು.