ಬಿಜೆಪಿ ಯುವ ಮೋರ್ಚಾ – ಅಟಲ್ ಬಿಹಾರಿ ವಾಜಪೇಯಿ ಕಾರ್ಯಕ್ರಮ

ರಾಯಚೂರು.ಡಿ.೨೫- ಭಾರತೀಯ ಜನತಾ ಪಕ್ಷ ಹಿರಿಯ ನಾಯಕ ಹಾಗೂ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಅಂಗವಾಗಿ ಇಂದು ಯುವ ಮೋರ್ಚಾದಿಂದ ಗೋಶಾಲೆಯಲ್ಲಿ ಗೋಮಾತೆ ಪೂಜೆ ಮತ್ತು ಬೆಲ್ಲ, ಶೇಂಗಾ, ಇಂಡಿ ಹಾಗೂ ಮೇವು ನೀಡುವ ಮೂಲಕ ಕಾರ್ಯಕ್ರಮ ಆಚರಿಸಲಾಯಿತು. ಯುವ ಮೋರ್ಚಾದ ಅಧ್ಯಕ್ಷರಾದ ಜಂಬಣ್ಣ ಮಂಕಲ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಸಲಾಯಿತು. ಭಾರತೀಯ ಜನ ಸಂಘದಿಂದ ಭಾರತೀಯ ಜನತಾ ಪಕ್ಷದವರೆಗೂ ಹಾಗೂ ಪಕ್ಷ ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವ ಅವಧಿವರೆಗೂ ಅಜಾತ ಶತೃವಾಗಿ ಪಕ್ಷ ಸಂಘಟನೆ ಮತ್ತು ದೇಶದ ಅಭಿವೃದ್ಧಿಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ಗೋಶಾಲೆಯಲ್ಲಿ ನಡೆಸಲಾಯಿತು. ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮತ್ತು ಗೋಪೂಜೆ ಮತ್ತು ಮೇವು ಇಂಡಿ ನೀಡುವ ಮೂಲಕ ಈ ಕಾರ್ಯಕ್ರಮ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಿಜಯಕುಮಾರ ಸಜ್ಜನ್, ಕೆ.ವೇಣುಗೋಪಾಲ, ರಂಗನಾಥ, ಅನಿಲ್ ಕುಮಾರ, ಪ್ರತಾಪರೆಡ್ಡಿ, ಸೂರಜ್ ಸಿಂಗ್, ರಾಹುಲ್ ರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.