ಬಿಜೆಪಿ ಯುವ ಮೋರ್ಚಾದಿಂದ ಹುತಾತ್ಮರ ದಿನಾಚರಣೆ

ಬಳ್ಳಾರಿ ಮಾ 24 : ಭಾರತೀಯ ಜನತಾ ಪಾರ್ಟಿಯ ನಗರ ಘಟಕದಿಂದ ನಿನ್ನೆ ಸಂಜೆ ನಗರದಲ್ಲಿ ಭಗತ್ ಸಿಂಗ್ ರಾಜಗುರು ಸುಖದೇವ್ ಗಲ್ಲಿಗೇರಿ ಹುತಾತ್ಮರಾದ ದಿನವನ್ನು ಶಹಿದ್ ದಿನವನ್ನಾಗಿ ಆಚರಿಸಿ ಅವರನ್ನು ಸ್ಮರಿಸಿದರು.
ಅದರಂಗಾವಗಿ ನಗರದ ಗಡಗಿ ಚೆನ್ನಪ್ಪ ವೃತ್ತದಿಂದ ಹೆಚ್.ಆರ್.ಜಿ ವೃತ್ತದವರೆಗೆ ಪಂಜಿನ ಮೆರವಣಿಗೆ ಮಾಡಿ ವೀರ ಯೋಧರಿಗೆ ನಮನಗಳನ್ನು ಸಲ್ಲಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಡಾ.ಅರುಣಾ ಅವರು ಈ ಸಂದರ್ಬದಲ್ಲಿ ಮಾತನಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣತೆತ್ತವರ ಸ್ಮರಣೆ ಮತ್ತು ಅವರ ಆದರ್ಶ ನಮಗೆಲ್ಲ ಮಾರ್ಗದರ್ಶನ ಎಂದರು.
ಪಕ್ಷದ ನಗರ ಅಧ್ಯಕ್ಷ ಬಿ.ವೆಂಕಟೇಶ್ವರ, ಪ್ರಧಾನ ಕಾರ್ಯದರ್ಶಿ ಕೆ.ರಾಮಾಂಜನಿ. ಯುವ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಅಡವಿಸ್ವಾಮಿ ಜಿಲ್ಲಾಧ್ಯಕ್ಷ ಸೋಮಶೇಖರ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ನಗರ ಯುವಮೋರ್ಚಾ ನಗರ ಘಟಕ ಅಧ್ಯಕ್ಷ ಅರುಣ್ ಬಾಲಚಂದ್ರ, ಪ್ರಧಾನ ಕಾರ್ಯದರ್ಶಿಗಳಾದ ಓಂ ಪ್ರಕಾಶ್, ಉಮೇಶ್, ಪದಾಧಿಕಾರಿಗಳಾದ ಸುಧಾಕರ್, ವಿನೋದ್, ಸತೀಶ್, ಕೇಶವ, ಕೃಷ್ಣಾರೆಡ್ಡಿ, ಉಲ್ಲಾಸ್, ದೇವಿನಗರ ನವೀನ್, ಸಾಗರ್, ವಿನೋದ್. ದುರ್ಗಾ ಪ್ರಸಾದ್, ಇಂದ್ರನಗರ ಪವನ್, ಚಿರು ಸಿದ್ದೇಶ್ ಮೊದಲಾದವರು ಇದರಲ್ಲಿ ಭಾಗವಹಿಸಿದ್ದರು.