ಬಿಜೆಪಿ ಯುವ ಮೋರ್ಚಾದಿಂದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ.

ದಾವಣಗೆರೆ.ಜ.೧೩; ಜಿಲ್ಲಾ ಯುವ ಮೋರ್ಚಾದ ವತಿಯಿಂದ ಸ್ವಾಮಿ ವಿವೇಕಾನಂದರ 158ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. 
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷರಾದ ಆರ್.ಎಲ್. ಶಿವಪ್ರಕಾಶ್‌ ಸ್ವಾಮಿ ವಿವೇಕಾನಂದರ ಆದರ್ಶ ಮತ್ತು ತತ್ವಗಳನ್ನು ಎಲ್ಲಾ ಯುವಕರು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾದ ಯಲ್ಲೇಶ್‌ರವರು ಮಾತನಾಡಿ ಸ್ವಾಮಿ ವಿವೇಕಾನಂದರವರು ಆದರ್ಶ ವ್ಯಕ್ತಿ. ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಬೇಕೆಂದು ವಿಶ್ವದಲ್ಲಿ ಹಿಂದೂ ಧರ್ಮದ ಬಗ್ಗೆ ತಿಳಿಸಿಕೊಟ್ಟಂತಹ ಮಹಾನ್ ವ್ಯಕ್ತಿ ಹಾಗೂ ತಾನು ಜೀವಿಸಿದ ಅತಿ ಸಣ್ಣ ಜೀವಿತಾ ಅವಧಿಯಲ್ಲೆ ತನ್ನ ತತ್ವಗಳು ಮತ್ತು ಕಾಯಕದ ಬಗ್ಗೆ ಅವರಿಗಿರುವ ಏಕಾಗ್ರತಯಿಂದ ವಿಶ್ವದಲ್ಲಿ ಯುಗ ಪುರುಷರನ್ನಾಗಿ ಕರೆಸಿಕೊಂಡವರು.ಯುವಕರು ಅವರ “ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ”. ತತ್ವದಲ್ಲಿನ ಅರ್ಥವನ್ನು ತಿಳಿದು ತಮ್ಮ ಜೀವನದಲ್ಲಿ ಗುರಿ ಮುಟ್ಟುವ ತನಕ ತಮ್ಮ ಕಾಯಕವನ್ನು ನಿಲ್ಲಿಸದಿರಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರಾಕೇಶ, ಸಚಿನ್, ಕಿಶೋರ್, ಚಂದ್ರು, ನಾಗರಾಜ ಅಂಗಡಿ, ಹರೀಶ್ ರಾಕೇಶ್, ಭಜರಂಗಿ ದಕ್ಷಿಣ ಯುವ ಮೋರ್ಚಾದ ಅಧ್ಯಕ್ಷರಾದ ರಾಕೇಶ್‌ರವರು ಉತ್ತರ ಯುವ ಮೋರ್ಚಾದ ಅಧ್ಯಕ್ಷರಾದ ಸಚಿನ್ ವರ್ಣೇಕರ್‌ರವರು ಮತ್ತು ಶಶಿಕುಮಾರ್‌ರವರು ಉಪಸ್ಥಿತರಿದ್ದರು