ಬಿಜೆಪಿ ಯುವ ಮೋರ್ಚಾದಿಂದ ಶಾಲೆ ಆವರಣ ಸ್ವಚ್ಛತೆ

ಬಳ್ಳಾರಿ ಮಾ 29 : ನಗರ ಯುವ ಮೋರ್ಚಾ ಘಟಕದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿಯ ಬಾಲಕಿಯ ಸರ್ಕಾರಿ ಪದವಿ ಪೂರ್ವ ಕಾಲೇಜ್ ಮತ್ತು ಶಾಲಾ ಆವರಣವನ್ನು ನಿನ್ನೆ ಸ್ವಚ್ಛಗೊಳಿಸಲಾಯಿತು.
ಈ ಸ್ವಚ್ಛತಾ ಕಾರ್ಯಕ್ರಮಕ್ಕೆ ನಗರದ ಶಾಸಕ ಜಿ. ಸೋಮಶೇಖರ್ ರೆಡ್ಡಿ ಅವರು ಚಾಲನೆ ನೀಡಿ ಸ್ವಚ್ಛತಾ ಕಾರ್ಯದಲ್ಲೂ ಪಾಲ್ಗೊಂಡಿದ್ದರು.
ಯುವ ಮುಖಂಡ ಗಾಲಿ ಶ್ರವಣ್ ಕುಮಾರ್ ರೆಡ್ಡಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌತ್ಕರ್ ಶ್ರೀನಿವಾಸ್ , ರಾಬಕೊ ನಿರ್ದೇಶಕ
ವೀರಶೇಖರರೆಡ್ಡಿ, ಕಾಲೇಜಿನ ಪ್ರಾಂಶುಪಾಲ ಮಹಾಲಿಂಗನಗೌಡ, ಬಿಜೆಪಿ ಯುವಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಅಡಿವಿ ಸ್ವಾಮಿ, ಜಿಲ್ಲಾ ಅಧ್ಯಕ್ಷ ಸೋಮಶೇಖರ್ ಗೌಡ, ನಗರ ಅಧ್ಯಕ್ಷ ಅರುಣ್ ಬಾಲಚಂದ್ರ, ನಗರ ಪ್ರಧಾನ ಕಾರ್ಯದರ್ಶಿಗಳಾದ ಓಂ ಪ್ರಕಾಶ್, ಉಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಘವೇಂದ್ರ, ಸುಧಾಕರ್, ವಿನೋದ್, ಕೇಶವ್, ರಾಘವೇಂದ್ರ, ತಿಪ್ಪೇಶ್, ರಾಕೇಶ್, ಸಿದ್ದೇಶ್, ವಿನೋದ್ ಯಾದವ್, ರಂಗ, ಸಾಯಿ, ವಿಶಾಲ್, ಇಂದ್ರ ನಗರ ಪವನ್, ದೇವಿನಗರ ನವೀನ್, ವಿನೋದ್ ಗೊಂದಲ, ಬಸವರಾಜ್, ಕೃಷ್ಣ ಹಾಗೂ ಸ್ಥಳೀಯ ಯುವಕರು ಕಾರ್ಯಕರ್ತರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.