ಬಿಜೆಪಿ ಯುವ ಮೋರ್ಚಾದಿಂದ ವಿಶ್ವ ಪರಿಸರ ದಿನ ಆಚರಣೆ

ಸಿರುಗುಪ್ಪ ಜೂ 06 : ತಾಲೂಕಿನ ತೆಕ್ಕಲಕೋಟೆ ಪಟ್ಟಣದ 1ನೇ ವಾರ್ಡಿನ ಸಿಂಧೋಳ್ ಕಾಲೋನಿಯ ಸರ್ಕಾರಿ ಉದ್ಯಾನವನದಲ್ಲಿ ಬಿಜೆಪಿ ಯುವ ಮೋರ್ಚಾ ತಾಲೂಕ ಅಧ್ಯಕ್ಷ ಎಂ.ಎಸ್.ಸಿದ್ದಪ್ಪ ಸಸಿಗಳನ್ನು ನೆಟ್ಟು ನೀರು ಹಾಕಿದರು.
ಇದೇ ಸಂದರ್ಭದಲ್ಲಿ ತೆಕ್ಕಲಕೋಟೆ ಪ.ಪಂ.ಉಪಾಧ್ಯಕ್ಷ ವಿ.ಮಂಜುನಾಥ, ಮುಖಂಡರಾದ ಕೆ.ಮಾರುತಿ, ಎಂ.ಎಸ್.ಕೊಮಾರೆಪ್ಪ ಇದ್ದರು.