ಬಿಜೆಪಿ ಯುವಮೋರ್ಚಾ ಸಮಾವೇಶ

ಕಲಬುರಗಿ ನ 19: ಕಲಬುರಗಿ ಮಹಾನಗರ ಜಿಲ್ಲೆ ಮತ್ತು ಕಲಬುರಗಿ ಗ್ರಾಮಾಂತರ ಜಿಲ್ಲೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಸಮಾವೇಶವು ರಾಜ್ಯ ಯುವ ಮೋರ್ಚಾ ಅಧ್ಯಕ್ಷರಾದ ಡಾ. ಸಂದೀಪ ಕುಮಾರ್ ರವರ ನೇತೃತ್ವದಲ್ಲಿ ನಗರದ ಎಚ್‍ಕೆಸಿಸಿಐ ಶ್ರೀನಿವಾಸರಾವ್ ರಘೋಜಿ ಸಭಾಂಗಣದಲ್ಲಿ ಜರುಗಿತು .
ಈ ಸಂದರ್ಭದಲ್ಲಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಮತ್ತು ಮಹಾನಗರ ಜಿಲ್ಲಾ ಅಧ್ಯಕ್ಷ ಸಿದ್ದಾಜಿ ಪಾಟೀಲ , ಯುವ ನಾಯಕರಾದ ಚಂದು ಪಾಟೀಲ್, ನಗರ ಯುವ ಮೋರ್ಚಾ ಅಧ್ಯಕ್ಷ ಶ್ರೀನಿವಾಸ ದೇಸಾಯಿ , ಗ್ರಾಮಾಂತರ ಯುವ ಮೋರ್ಚಾ ಅಧ್ಯಕ್ಷ ಪ್ರವೀಣ್ ತೆಗನೂರ್ , ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಶಿವ ಅಷ್ಠಗಿ ಹಾಗೂ ರಾಜ್ಯ ,ಜಿಲ್ಲಾ ಮತ್ತು ಎಲ್ಲಾ ಮಂಡಲಗಳ ಪದಾಧಿಕಾರಿಗಳು , ಕಾರ್ಯಕರ್ತರು ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಅಧ್ಯಕ್ಷ ಡಾ ಸಂದೀಪ ಕುಮಾರ್. ಕೆಸಿ ಹಾಗೂ ಇತರೆ ಮುಖಂಡರನ್ನು ಯುವ ಮೋರ್ಚಾ ಉಪಾಧ್ಯಕ್ಷ ಶಿವ ಅಷ್ಠಗಿ, ಕಾರ್ಯಕಾರಿಣಿ ಸದಸ್ಯ ಮೇಘರಾಜ ಅರಳಿ,ಬಾಬುರಾವ ವೈಜಾಪುರ ಸೇರಿದಂತೆ ಇತರರು ಬೃಹತ್ ಹೂಮಾಲೆಯಿಂದ ಸನ್ಮಾನಿಸಿದರು