ರುದ್ರಪ್ಪ ಭಂಡಾರಿ
ಯಲಬುರ್ಗಾ, ಏ.10: ಕೊಪ್ಪಳ ಜಿಲ್ಲಾ ಬಿಜೆಪಿ ಪ್ರಧಾನ ಕಾಯ೯ದಶಿ೯ ನವೀನ್ ಗುಳಗನ್ನವರ್ ಹೆಸರು ಚಲಾವಣೆ ಇರುವುದು ಪಕ್ಷದ ಜಿಲ್ಲಾ ಘಟಕದಲ್ಲಿ ಓಕೆ ಆದರೆ ಸ್ವಂತ ವಿಧಾನ ಸಭಾ ಕ್ಷೇತ್ರದಲ್ಲಿ ಆಸಕ್ತಿ ಕಮ್ಮಿ ಯಾಕೆ ಎನ್ನುವ ಸನ್ನಿವೇಶ ಎದುರಾಗಿದೆ. ಕಳೆದ ಐದು ವರುಷಗಳ ಅವಧಿಯಲ್ಲಿ ಯಲಬುರ್ಗಾ ಕ್ಷೇತ್ರದಲ್ಲಿ ನಿರೀಕ್ಷೆ ಪ್ರಕಾರ ಕಾಯ ೯ಕತ೯ರ ಜೊತೆಗೆ ಹಾಗೂ ಸ್ಥಳೀಯ ಬಿಜೆಪಿ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿದ್ದು ಬಹಳ ಅಪರೂಪ. ಇದಕ್ಕೆ ಕಾರಣ ಏನೆಂದರೆ ಹಾಲಪ್ಪ ಅವರ ಬಣದ ಜೊತೆ ಸಮನ್ವಯ ಕೊರತೆ ಎನ್ನುವುದು ಸ್ಪಷ್ಟ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಬಿಜೆಪಿ ವಲಯದಲ್ಲಿ ಉತ್ತಮ ಹೆಸರಿದ್ದರು ಸಹ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಪಕ್ಷದ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳಲು ಅಪರೂಪ ಎಂಬ ಮಾತು ಸರ್ವರಲ್ಲಿ ಕೇಳಿ ಬರುತ್ತಿವೆ. ಈಗ ಸುದ್ದಿ ಕ್ಷೇತ್ರದಲ್ಲಿ ಬಿಜೆಪಿ ಆಕಾಂಕ್ಷಿಗಳ ಪೈಕಿ ಇವರ ಹೆಸರು ಕೂಡ ಮುಂಚೂಣಿಯಲ್ಲಿರುವುದು ಆಶ್ಚರ್ಯಕರ ಸಂಗತಿ. ಪ್ರಸಕ್ತ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಬಂದಾಗ ವೇದಿಕೆಯಲ್ಲಿ ನವೀನ್ ಕುಮಾರ್ ಹಾಜರಾಗಿದ್ದರು, ಅವರಿಗೆ ವೇದಿಕೆಯಲ್ಲಿ ಮಾತಾಡಲು ಅವಕಾಶ ಸಿಗದ ಪರಿಣಾಮ ವೇದಿಕೆ ಇಳಿದು ಮನೆಗೆ ಹೊರಟು ಹೋದರು. ಇದನ್ನು ಅನೇಕ ಕಾರ್ಯಕರ್ತರು ಮುಖಂಡರು ಗಮನಿಸಿದ್ದಾರೆ. ನಂತರ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ಸಮಾರಂಭಕ್ಕೆ ಬಂದಾಗ ನವೀನ್ ಅವರ ಗೈರು ಎದ್ದು ಕಂಡಿತು. ಅಂದಿನಿಂದ ಪ್ರಶಕ್ತ ಸಂದರ್ಭದಲ್ಲಿ ಸಚಿವ ಹಾಲಪ್ಪ ಆಚಾರ್ ಅವರು ವಿವಿಧ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಸಂಚಾರ ಮಾಡಿ ಪಕ್ಷ ಸಂಘಟನೆ ಹಾಗೂ ಚುನಾವಣೆ ಎದುರಿಸುವ ಬಗ್ಗೆ ಬಿಜೆಪಿ ಅಭ್ಯರ್ಥಿ ಗೆಲುವು ಕುರಿತಾಗಿ ಕಾರ್ಯಕರ್ತರೊಂದಿಗೆ ಸಂಘಟನಾ ಸಭೆಯ ವರೆಗೂ ನವೀನ್ ಅವರು ಕಾಣಿಸಿಕೊಳ್ಳಲಿಲ್ಲ. ಆದರೂ ಸಹ ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳದ ನವೀನ್ ಒಂಟಿ ಸಲಗದಂತೆ ಹೇಗಾದರೂ ಮಾಡಿ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳಲು ಶತಾಯಗತಾಯ ಮಾಡುತ್ತಿದ್ದಾರೆ, ಪಕ್ಷದ ಜಿಲ್ಲಾ ವೇದಿಕೆ ಸಿಕ್ಕಾಗ ತಾಸುಗಟ್ಟಲೆ ಘರ್ಜನೆ ಮಾತುಗಳನ್ನು ಹೇಳುವ ಮೂಲಕ ನವೀನ್ ಜನರ ಮನ ಗೆಲ್ಲುತ್ತಿದ್ದಾರೆ, ಪಕ್ಷದ ಅನೇಕ ಘಟಕಗಳು ಅನೇಕ ಗಣ್ಯರು ಪಕ್ಷದ ಮುಖಂಡರು ಹಾಲಪ್ಪಾಚಾರ್ ಅವರ ಮಸಬ ಹಂಚಿನಾಳ ಕಚೇರಿಗೆ ಬರುತ್ತಾರೆ , ಬಂದಾಗಲೂ ಸಹ ನವೀನ ಮಾರುದ್ದ ಇರುವುದು ಕಾರಣ ಏನು ಎಂಬುದು ಕಾರ್ಯಕರ್ತರ ಯಕ್ಷಪ್ರಶ್ನೆ. ಕಳೆದ ವರ್ಷ ನಡೇದ ಎಂಎಲ್‌ಸಿ ಚುನಾವಣೆಯಲ್ಲಿ ಪತ್ರಕರ್ತರು ನವೀನ್ ಅವರನ್ನು ಸಂಪರ್ಕಿಸಿ, ನೀವು ಎಂಎಲ್ಸಿ ಅಭ್ಯರ್ಥಿಯಾಗ ಬಹುದಿತ್ತಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ನವೀನ್, ಎಂಎಲ್‌ಸಿಗ್ ಯಾಕೆ ಕೇಳಬೇಕ್ರಿ… ಎಲ್ಲಿ ಕಳೆದುಕೊಂಡಿದ್ದೆವು….. ಅಲ್ಲಿಯೆ ಟಿಕೆಟ್ ಪಡಿಬೇಕು ಎನ್ನುವ ಮಾರ್ಮಿಕ ಮಾತು ನವೀನ ಅವರ ಮನದಲ್ಲಿ ಅಚ್ಚು ಒತ್ತಿದಂತಾಗಿದೆ. ಎನ್ನುವುದಕ್ಕೆ ಇದು ನಿದಶ೯ನ. ಆದ್ರೂ ಸಹ ಬಿಜೆಪಿ ಅವರು ಟಿಕೆಟ್ ಇನ್ನೂ ಘೋಷಣೆ ಮಾಡಿಲ್ಲ. ಹಾಲಪ್ಪ ಆಚಾರ ಬಣದಲ್ಲಿ ನವೀನ ಅವರ ಬಣದಲ್ಲಿ ಭೂತೇ ಕಳಕನ ಗೌಡ ಹೀಗೆ ಬಣಗಳ ಬಗ್ಗೆ ಕುತೂಹಲ ಎದ್ದಿದೆ. ಮಾಜಿ ಶಾಸಕ ಹೋರಾಟಗಾರ ಈಶಣ್ಣ ಗುಳಗಣ್ಣವರ ಹಿರಿಯ ಪುತ್ರರಾಗಿರುವ ನವೀನ್, ತಂದೆಯ ಹೆಸರಿನಲ್ಲಿ ವೋಟ್ ಬ್ಯಾಂಕ್ ಹಿಡಿತದಲ್ಲಿ ಭರವಸೆಯ ರಾಜಕಾರಣ ಮಾಡುತ್ತಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಒಂಟಿ ಸಲಗದಂತೆ ರಾಜಕಾರಣದ ಕೇಂದ್ರಬಿಂದುವಾಗಿರುವ ನವೀನ್ ಅವರ ಮೌನ ಹೋರಾಟ ಗಮನಿಸಿ ಹಿರಿಯ ಮುಖಂಡರು ಯಾವ ರೀತಿಯ ಮಾರ್ಗ ತೋರಿಸಬಲ್ಲರು ಎಂಬುದನ್ನು ಕಾದುನೋಡಬೇಕಾಗಿದೆ. ಸದ್ಯ ಜಿದ್ದಾಜಿದ್ದಿ ನಡೆದಿರುವ ಟಿಕೆಟ್ ಪೈಪೋಟಿ ಮೇಲೆ ಎಲ್ಲರ ಆಸಕ್ತಿ ಕೆರಳಿಸಿದೆ. ಜನಾರ್ದನ್ ರೆಡ್ಡಿ ಅವರ ಕೆ ಆರ್ ಪಿ ಪಿ ಪಕ್ಷದಿಂದಲೂ ಸಹ ಟಿಕೆಟ್ ಆಹ್ವಾನ ಬಂದಿತ್ತಂತೆ ಎಂಬ ಗಾಳಿ ಸುದ್ದಿಯು ಇದೆ. ಇದ್ಯಾವುದನ್ನೂ ಲೆಕ್ಕಿಸದ ನವೀನ್ ಬಿಜೆಪಿ ಟಿಕೆಟ್ ಮೇಲೆ ಹದ್ದಿನ ಕಣ್ಣು ಇರಿಸಿಕೊಂಡಿದ್ದಾರೆ. ಹೋರಾಟ ಫಲಪ್ರದವಾಗುತ್ತದೆ ಎಂಬುದು ಕಾದು ನೋಡಬೇಕಿದೆ.