
ನವದೆಹಲಿ, ಏ.17- ಕರ್ನಾಟಕ ವಿಧಾನಸಭಾ ಕ್ಷೇತ್ರಕ್ಕೆ ಮುಂದಿನ ತಿಂಗಳ 10 ರಂದು ನಡೆಯಲಿರುವ ಚುನಾವಣೆಗೆ ಮೂರನೇ ಪಟ್ಟಿಯಲ್ಲಿ ಹತ್ತು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಇದುವರೆಗೂ ಬಿಜೆಪಿ 222 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿದೆ.ಶಿವಮೊಗ್ಗ ನಗರ ಮತ್ತು ಮಾನ್ವಿ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಹೆಸರನ್ನು ಬಾಕಿ ಉಳಿಸಿಕೊಂಡಿದ್ದು ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಟಿಕೆಟ್ ಅಕಾಂಕ್ಷಿಯಾಗಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಬೆಳಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು ಇದರ ಬೆನ್ನಲ್ಲೇ ಬಿಜೆಪಿ ಈ ಕ್ಷೇತ್ರದಿಂದ ಮಹೇಶ್ ಟೆಂಗಿನಕಾಯಿಗೆ ಟಿಕೆಟ್ ನೀಡಲಾಗಿದೆ.
ಬೆಂಗಳೂರಿನ ಮಹದೇವಪುರ ವಿಧಾನಭಾ ಕ್ಷೇತ್ರದಿಂದ ಅರವಿಂದ ಲಿಂಬಾಳಿ ಬದಲಿಗೆ ಅವರ ಪತ್ನಿ ಮಂಜುಳಾಗೆ ಟಿಕೆಟ್ ನೀಡಲಾಗಿದೆ. ಹೆಬ್ಬಾಳ ವಿಧಾನಾಸಭಾ ಕ್ಷೇತ್ರದಿಂದ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡ ಬದಲು ಅವರ ಪುತ್ರ ಕಟ್ಟಾ ಜಗದೀಶ್ ಗೆ ಟಿಕೆಟ್ ನೀಡಲಾಗಿದೆ.
ಬೆಂಗಳೂರಿನ ಗೋವಿಂದರಾಜ ವಿಧಾನಸಭಾ ಕ್ಷೇತ್ರದಿಂದ ಸಚಿವ ವಿ.ಸೋಮಣ್ಣ ಅವರ ಪುತ್ರ ಅರಣ್ ಸೋಮಣ್ಣ ಅವರಿಗೆ ಟಿಕೆಟ್ ನಿರಾಕರಿಸಿ ಪಾಲಿಕೆ ಮಾಜಿ ಸದಸ್ಯ ಉಮೇಶ್ ಶೆಟ್ಟಿಗೆ ನೀಡಲಾಗಿದೆ.
ಕೊಪ್ಪಳ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಸಂಸದ ಕರಡಿ ಸಂಗಣ್ಣಗೆ ಹೈಕಮಾಂಡ್ ವಿಧಾನಸಭೆ ಸ್ಪರ್ಧಿಸುವ ಅಸೆಗೆ ತಣ್ಣೀರೆರಚಿದೆ.
ಇನ್ನು ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ಎಸ್. ಎ ರಾಮದಾಸ್ ಬದಲಿಗೆ ಶ್ರೀವತ್ಸ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಟಿಕಟ್ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದ ರಾಮದಾಸ್ ಅವರಿಗೆ ತೀವ್ರ ಹಿನ್ನೆಡೆಯಾಗಿದೆ.
ಯಾರಾರಿಗೆ ಟಿಕೆಟ್;
- ನಾಗಾಠಾಣ ( ಎಸ್ ಸಿ) – ಸಂಜೀವ್ ಐಹೊಳೆ
- ಸೇಡಂ – ರಾಜ್ ಕುಮಾರ್ ಪಾಟೀಲ್,
- ಕೊಪ್ಪಳ- ಮಂಜುಳ ಅಮರೇಶ್
- ರೋಣಾ – ಕಳಕಪ್ಪ ಬಂಡಿ
- ಹುಬ್ಬಳ್ಳಿ- ಧಾರವಾಡ ಸೆಂಟ್ರಲ್- ಮಹೇಶ್ ಟೆಂಗಿನಕಾಯಿ
- ಹಗರಿ ಬೊಮ್ಮನಹಳ್ಳಿ ಎಸ್ ಸಿ- ಬಿ.ರಾಮಣ್ಣ
- ಹೆಬ್ಬಾಳ – ಕಟ್ಟಾ ಜಗದೀಶ್
- ಗೋವಿಂದರಾಜ ನಗರ – ಉಮೇಶ್ ಶೆಟ್ಟಿ
- ಮಹದೇವ ಪುರ – ಎಸ್ ಸಿ – ಮಂಜುಳಾ ಅರವಿಂದ ಲಿಂಬಾವಳಿ
- ಕೃಷ್ಣ ರಾಜ – ಶ್ರೀವತ್ಸ