ಬೀದರ್:ಎ.6: ಪದ್ಮಶ್ರೀ ಪುರಸ್ಕøತ ಶಾ ರಶೀದ್ ಅಹ್ಮದ್ ಖಾದ್ರಿ ಅವರು ಬುಧವಾರ ಪ್ರಶಸ್ತಿ ಸ್ವೀಕರಿಸಿದ ನಂತರ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು.
ಕಾಂಗ್ರೆಸ್ ಆಡಳಿತಾವಧಿಯಲ್ಲಿ ನನಗೆ ಪದ್ಮಶ್ರೀ ಸಿಗಲಿಲ್ಲ.
ಬಿಜೆಪಿ ಸರ್ಕಾರ ನನಗೆ ಈ ಗೌರವವನ್ನ ನೀಡುವುದಿಲ್ಲ ಎಂದು ನಾನು ಭಾವಿಸಿದ್ದೆ. ಆದ್ರೆ, ನನ್ನನ್ನು ಗುರುತಿಸುವ ಮೂಲಕ ನೀವು ನನ್ನನ್ನ ತಪ್ಪು ಎಂದು ಸಾಬೀತುಪಡಿಸಿದ್ದೀರಿ’ ಎಂದು ಹೇಳಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ, ನಾನು ಈ ಪ್ರಶಸ್ತಿಯನ್ನ ಪಡೆಯುವುದಿಲ್ಲ ಎಂದು ನಾನು ಭಾವಿಸಿದ್ದೆ. ಯಾಕಂದ್ರೆ, ಬಿಜೆಪಿ ಎಂದಿಗೂ ಮುಸ್ಲಿಮರಿಗೆ ಏನನ್ನೂ ನೀಡುವುದಿಲ್ಲ. ಆದ್ರೆ, ಪ್ರಧಾನಿ ಮೋದಿ ನನ್ನನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ತಪ್ಪು ಎಂದು ಸಾಬೀತುಪಡಿಸಿದರು ಎಂದು ಅಹ್ಮದ್ ರಸಿದ್ ಖಾದ್ರಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.