ಬಿಜೆಪಿ ಮುಖಂಡ ಸಿ.ಟಿ ರವಿಯವರನ್ನು ಭೇಟಿ ಮಾಡಿದ ಕೆ.ಬಿ ಕೊಟ್ರೇಶ್

ಸಂಜೆವಾಣಿ ವಾರ್ತೆ

ದಾವಣಗೆರೆ.ಫೆ.೮; ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ  ಸಿ. ಟಿ. ರವಿ ಅವರನ್ನು ದಾವಣಗೆರೆ ಬಿಜೆಪಿ ಮುಖಂಡರಾದ ಕೆ.ಬಿ ಕೊಟ್ರೇಶ್ಭೇಟಿ ಮಾಡಿದರು. ಈ ವೇಳೆ ಸಿ. ಟಿ. ರವಿ ಅವರ ಜೊತೆ ಕೆಲವು ವಿಚಾರಗಳ ಕುರಿತಂತೆ ಚರ್ಚಿಸಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಬಿ. ವೈ. ವಿಜಯೇಂದ್ರ  ಆಯ್ಕೆ ಬಳಿಕ ಪಕ್ಷ ಮತ್ತಷ್ಟು ಸಂಘಟಿತವಾಗುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿಯೂ ಜನೋಪಯೋಗಿ, ಸಮಾಜ ಸೇವೆ, ಅರಣ್ಯ ಇಲಾಖೆ ಅಧಿಕಾರಿಯಾಗಿ ಮಾಡಿದ ಕೆಲಸಗಳ ಕುರಿತಂತೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿ. ಟಿ. ರವಿ ಅವರು ಪ್ರಶಂಸೆ ವ್ಯಕ್ತಪಡಿಸಿದರು. ಸಿ. ಟಿ. ರವಿ ಅವರ ಜೊತೆ ಪಕ್ಷ ಸಂಘಟನೆ ಕುರಿತಂತೆ ಸಮಾಲೋಚನೆ ನಡೆಸಿ. ಆರ್ ಎಸ್ ಎಸ್ ನಲ್ಲಿಯೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದು, ಎ. ಕೆ. ಫೌಂಡೇಶನ್ ಮೂಲಕ ಮಾಡಿರುವ ಸಮಾಜ ಸೇವೆ ಕುರಿತು ಸವಿಸ್ತರವಾಗಿ ಮಾಹಿತಿ ನೀಡಿದ್ದಾರೆ.