ಬಿಜೆಪಿ ಮುಖಂಡ ಮಹೇಶ ಸಾಹು ಮಶಿಹಾಳ ಸ್ಪಷ್ಟೀಕರಣ

ದೇವದುರ್ಗ,ಮಾ.೧೩- ನಿನ್ನೆ ನನ್ನೂರಾದ ಹೀರೇಬೂದೂರಿನಲ್ಲಿ ನನಗಾಗದವರು ನನಗೆ ಸಂಪೂರ್ಣ ಬ್ರೈನ್ ವಾಶ್ ಮಾಡಿ, ಪ್ರಚೋದಿಸಿ, ಒತ್ತಾಯ ಪೂರಕವಾಗಿ ಮನವೋಲಿಸಿ ನನ್ನನ್ನು ಜೆಡಿಎಸ್ ಪಕ್ಷವನ್ನು ಸೇರ್ಪಡೆ ಮಾಡಿಕೊಂಡಿದ್ದರು. ನಾನು ಕೂಡಾ ಅನಿರೀಕ್ಷಿತವಾಗಿ ಪಕ್ಷಕ್ಕೆ ತೆರಳಿದೆನು.
ಆದರೆ ನಾನು ಬಿಜೆಪಿ ಪಕ್ಷದಲ್ಲಿರುವುದು ಸತ್ಯ ಪಕ್ಷವನ್ನು ನಾನು ಬಿಟ್ಟಿಲ್ಲವೆಂದು ಇಂದು ಪತ್ರಿಕಾ ಪ್ರಕಟಣೆಯನ್ನು ನೀಡಿದ್ದಾರೆ. ನಾನು ನಿನ್ನೆ ಜೆಡಿಎಸ್ ಪಕ್ಷಕ್ಕೆ ತೆರಳಿದ ನಂತರ ತೆಗೆದುಕೊಂಡ ನಿರ್ಧಾರಕ್ಕೆ ತಾಲೂಕಿನ ಹಲವಾರು, ಬುದ್ಧಿಜೀವಿಗಳು, ಹಿತೈಶಿಗಳು ನನಗೆ ದೂರವಾಣಿ ಕರೆ ಮಾಡಿ ವಿರೋಧ ವ್ಯಕ್ತಪಡಿಸುವ ಮೂಲಕ ದೇವದುರ್ಗ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶಾಸಕ ಕೆ.ಶಿವನಗೌಡ ನಾಯಕ ಅವರು ಸಾಕಷ್ಟು ಶ್ರಮಿಸಿದ್ದಾರೆ. ಈ ಚುನಾವಣೆಯಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ವಿರೋದಿಸತಕ್ಕಂತ ಮನಸ್ಥಿತಿಗಳಿಗೆ ಕೈಜೋಡಿಸುವಂತಹ ಕೆಲಸ ಯಾವತ್ತು ನೀವು ಮಾಡಬಾರದು ತೆಗೆದುಕೊಂಡಿರುವಂತಹ ತೀರ್ಮಾನವನ್ನು ಕೂಡಲೇ ಕೈ ಬಿಟ್ಟು ಪುನಃ ಬಿಜೆಪಿ ಪಕ್ಷಕ್ಕೆ ಸೇರಬೇಕು ಎಂದು ಒತ್ತಾಯ ಮಾಡಿದರು ಹಾಗಾಗಿ ಬಿಜೆಪಿ ಪಕ್ಷದಲ್ಲಿ ಇರುತ್ತೇನೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ನಾನು ಆತ್ಮಾವಲೋಕನ ಮಾಡಿಕೊಂಡು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಕೇವಲ ಶಿವನಗೌಡ ನಾಯಕರಿಂದ ಮಾತ್ರ ಸಾಧ್ಯವಾಗಿದೆ. ಇಂತಹ ನಾಯಕರನ್ನ ಕಳೆದುಕೊಂಡರೆ ದೇವದುರ್ಗ ತಾಲೂಕು ಮರಳಿ ಘತಕಾಲಕ್ಕೆ ಮರಳುವದು ನಿಶ್ಚಿತ ಎಂಬುದನ್ನು ಅರಿತುಕೊಂಡು. ನಾನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ತಪ್ಪಾಗಿದ್ದು, ಮರಳಿ ಭಾರತೀಯ ಜನತಾ ಪಕ್ಷಕ್ಕೆ ಸೇರುವ ಮೂಲಕ ಶಾಸಕರಿಗೆ ಸಂಪೂರ್ಣ ಬೆಂಬಲವಾಗಿ ನಿಂತು ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸುತ್ತೇನೆ ಎಂದರು.
ಜೊತೆಗೆ ನಾನು ರಾಜ್ಯ ಬಿಜೆಪಿಯ ಹಿರಿಯರಾದ ಯಡಿಯೂರಪ್ಪ, ದೇವದುರ್ಗ ಶಾಸಕರಾದ ಕೆ.ಶಿವನಗೌಡ ನಾಯಕ ಅವರ ಅನುಯಾಯಿಯಾಗಿದ್ದು, ಬಿಜೆಪಿಯನ್ನೇ ಬೆಂಬಲಿಸಿ, ಶಾಸಕರಾದ ಕೆ.ಶಿವನಗೌಡ ನಾಯಕರ ಹಾಗೂ ಬಿಜೆಪಿ ಪಕ್ಷದ ಗೆಲುವಿಗೆ ಹಗಲು-ರಾತ್ರಿ ಶ್ರಮವಹಿಸುವೆ ನನ್ನಂತೆ ಯಾವೊಬ್ಬ ಬಿಜೆಪಿ ಕಾರ್ಯಕರ್ತರು ನಾ ನಿನ್ನೆ ಮಾಡಿದಂತಹ ತಪ್ಪು ನಿರ್ಧಾರವನ್ನು ಸರಿ ಮಾಡಿಕೊಂಡು ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತೇನೆ ಎಂದು ಪತ್ರಿಕೆ ಹೇಳಿಕೆ ನೀಡಿದರು.