ಬಿಜೆಪಿ ಮುಖಂಡರಿಗೆ ಮಾರ್ಗದರ್ಶನ ಸಭೆ

ದಾವಣಗೆರೆ.ಸೆ.೧೮; ನಗರದ ಪೂಜಾ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ಇಂದು ಬಿಜೆಪಿ ವಿಭಾಗ ಪ್ರಭಾರಿ, ಸಹ ಪ್ರಭಾರಿ, ವಿಭಾಗ ಸಂಘಟನಾ ಮತ್ತು ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಯಿತು.ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಉಸ್ತುವಾರಿಗಳಾದ  ಅರುಣ್ ಸಿಂಗ್, ರಾಜ್ಯ ಅಧ್ಯಕ್ಷರು ಮತ್ತು ಸಂಸದರಾದ  ನಳಿನ್ ಕುಮಾರ್ ಕಟೀಲ್ ಮತ್ತು ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ  ಅರುಣ್ ಕುಮಾರ್ ಅವರ ನೇತೃತ್ವದಲ್ಲಿ ಈ ಸಭೆಯನ್ನು ಸಂಘಟಿಸಲಾಗಿತ್ತು.ಪಕ್ಷದ ಸಂಘಟನೆ ಮತ್ತು ಕೇಂದ್ರ- ರಾಜ್ಯ ಸರಕಾರಗಳ ವಿವಿಧ ಯೋಜನೆಗಳ ಕುರಿತು ಜನರಿಗೆ ಅರಿವು ಮೂಡಿಸುವ ಕುರಿತು ಮಾರ್ಗದರ್ಶನ ನೀಡಲಾಯಿತು.