ಬಿಜೆಪಿ ಮುಖಂಡರಿಂದ ಆಹಾರ ವಿತರಣೆ

ಬಳ್ಳಾರಿ ಮೇ 30 : ನಗರದ ವಿಮ್ಸ್ ಆಸ್ಪತ್ರೆ ಆವರಣದಲ್ಲಿ ಕೋವಿಡ್ ಎರಡನೇ ಅಲೆಯಿಂದ ಘೋಷಣೆ ಮಾಡಿರುವ ಲಾಕ್ ಡೌನ್ ನಿಂದ
ಆಹಾರಕ್ಕಾಗಿ ಪರಿತಪಿಸುವವರಿಗೆ ಬಳ್ಳಾರಿ ಗೆಳೆಯರ ಬಳಗದಿಂದ ಕಳೆದ 22 ನೇ ಗಳಿಂದ ಆಹಾರ ವಿತರಣೆ‌ ಮಾಡಲಾಗುತ್ತಿದ್ದು ಇಂದು ಬಿಜೆಪಿ ಮುಖಂಡರು ಈ ಆಹಾರದ ಪೊಟ್ಟಣ,‌ಮಾವಿನ ಹಣ್ಣು, ಕುಡಿಯುವ ನೀರಿನ ಬಾಟಲ್ ಗಳನ್ನು ವಿತರಿಸಿದರು.
ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದು‌ ಏಳು ವರ್ಷದ ಹಿನ್ನಲೆಯಲ್ಲಿ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಹಾಗೂ ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್ ಗುರುಲಿಂಗನ ಗೌಡ ಅವರ ಸಹಕಾರದಿಂದ ಇಂದು ಆಹಾರ ವಿತರಿಸಲಾಯಿತು ಎಂದು ಗೆಳೆಯರ ಬಳಗದ ಸದಸ್ಯರಾದ ಓಂಪ್ರಕಾಶ್ ತಿಳಿಸಿದ್ದಾರೆ.
ಈ‌ ಕಾರ್ಯದಲ್ಲಿ ಅರುಣ್ ಬಾಲಚಂದ್ರ, ನಾಗರಾಜ್ ಬಿ.ಪಿ, ಅಜಯ್ ನಾಯ್ಡು, ಕೃಷ್ಣ ಮೋಹನ್, ಗೋವಿಂದರೆಡ್ಡಿ, ಜೀವನ್, ವೀರೇಂದ್ರ, ಬಸಪ್ಪ, ನವೀನ್, ತರುಣ್, ಹಿತೇಶ್, ಸಾಗರ್, ರಾಜು, ಧನಶೇಖರ್, ಅನಿಲ್, ಸುರೇಶ್, ಕಾರ್ತಿಕ್ ಮೊದಲಾದವರು ಭಾಗವಹಿಸಿದ್ದರು.