ಬಿಜೆಪಿ ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಶಕ್ತಿಪ್ರದರ್ಶನ

ಕೆ.ಆರ್.ಪೇಟೆ, ಸೆ.17: ಬಿಜೆಪಿ ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ತನ್ನ ಶಕ್ತಿಪ್ರದರ್ಶನ ಮಾಡಲಿದೆ, ಸಚಿವ ನಾರಾಯಣಗೌಡರು ತಾಲ್ಲೂಕಿಗೆ ಮಾಡಿರುವ ಅಭಿವೃದ್ದಿ ಕಾರ್ಯಗಳನ್ನು ಆಧರಿಸಿ ಮತಯಾಚನೆ ಮಾಡಿ ಮುಂಬರುವ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿಯೂ ಬಿಜೆಪಿ ತನ್ನಖಾತೆ ತೆರೆಯಲಿದೆ ಎಂದು ಮೂಡ ಅಧ್ಯಕ್ಷ ಕೆ.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಸಚಿವ ನಾರಾಯಣಗೌಡರ ನಿವಾಸದ ಆವರಣದಲ್ಲಿ ಪೂರ್ವಭಾವಿಯಾಗಿ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿ ಈ ತಿಂಗಳ 30 ರಂದು ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘದ ಚುನಾವಣೆ ನಡೆಯಲಿದ್ದು ಆಕಾಂಕ್ಷಿಗಳು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕಾಗಿದ್ದು ಯಾರೇ ಅಭ್ಯರ್ಥಿಯಾಗಲಿ ಒಗ್ಗಟ್ಟಿನಿಂದ ನಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು, ಸಚಿವರು ಎಲ್ಲಾ ಹೋಬಳಿಗಳಿಗೂ ತಮ್ಮದೇ ಆದ ಅನುದಾನ ತಂದು ತಾಲ್ಲೂಕಿನ ಅಭಿವೃದ್ದಿಗಾಗಿ ಸಚಿವರಾದ ಆರು ತಿಂಗಳಲ್ಲಿಯೇ ಸುಮಾರು 500 ಕೋಟಿಗೂ ಅಧಿಕ ಅನುದಾನ ತಂದು ಅರ್ಪಣಾ ಮನೋಭಾವದಿಂದ ತಾಲ್ಲೂಕಿನ ಬಡಜನರ ಸೇವೆ ಮಾಡುತ್ತಿದ್ದಾರೆ, ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೂ ಕನಿಷ್ಟ ಹತ್ತು ಲಕ್ಷ ರೂಪಾಯಿಗಳ ಕಾಮಗಾರಿಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು 666 ಕೋಟಿ ಮೊತ್ತದ ಕಾಮಗಾರಿಗೆ ಕೆಲವೇ ದಿನಗಳಲ್ಲಿ ಅನುಮೋದನೆ ದೊರೆಯುವ ಸಾಧ್ಯತೆಯಿದೆ, ಆದ್ದರಿಂದ ಅವರಿಗೆ ಎಲ್ಲರೂ ಸಹಕಾರ ನೀಡಬೇಕಾಗಿದ್ದು ಮುಂದಿನ ದಿನಗಳಲ್ಲಿ ತಾಲ್ಲೂಕು ಸಾಕಷ್ಟು ಅಭಿವೃದ್ದಿ ಕಾಣಲಿದೆ ಆ ಕಾರಣಕ್ಕಾಗಿ ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಗೆಲ್ಲುವ ಮೂಲಕ ಆಡಳಿತಮಂಡಳಿಯನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳುವಂತಾಗಲು ಎಲ್ಲರ ಸಹಕಾರ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಪಕ್ಷದ ಶಿಸ್ತಿನ ಸಿಪಾಯಿಗಳಂತೆ ನೀವೆಲ್ಲರೂ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ ಉಪಾದ್ಯಕ್ಷ ಅಂಬರೀಶ್, ಕಿಕ್ಕೇರಿಪ್ರಭಾಕರ್,ಮಾಜಿ ಮನ್ ಮುಲ್ ನಿರ್ದೇಶಕ ಚನ್ನಿಂಗೇಗೌಡ, ಗೂಡೆಹೊಸಹಳ್ಳಿ ಜವರೇಗೌಡ, ಅಘಲಯ ಮಂಜುನಾಥ್,ಡಾ.ಕೃಷ್ಣಮೂರ್ತಿ ಟಿಎಪಿಸಿಎಂಎಸ್ ಅದ್ಯಕ್ಷ ಅಘಲಯ ಶ್ರೀಧರ್, ಬಿಜೆಪಿ.ತಾಲ್ಲೂಕು ಅದ್ಯಕ್ಷ ಪರಮೇಶ್, ಪುರಸಭಾ ಸದಸ್ಯರುಗಳಾದ ಹೆಚ್.ಆರ್.ಲೋಕೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗೇಶ್, ಎಪಿಎಂಸಿ ನಿರ್ದೇಶಕ ಸೋಮಣ್ಣ, ಪಿಎಲ್.ಡಿ. ಬ್ಯಾಂಕ್ ನಿರ್ದೇಶಕ ಕುಮಾರ್, ತಾ.ಪಂ.ಮಾಜಿ ಸದಸ್ಯ ಕುಮಾರ್, ಸಚಿವರ ಆಪ್ತ ಸಹಾಯಕ ದಯಾನಂದ್,ಬಿಜೆಪಿ ಮುಖಂಡರಾದ ಎ.ಪಿ.ಕೇಶವಗೌಡ, ಡಿ.ಪಿ.ಪರಮೇಶ್, ಬಳ್ಳೆಕೆರೆಪ್ರವೀಣ್, ಕರ್ತೇನಹಳ್ಳಿಸುರೇಶ್, ಮಂಜುನಾಥ್‍ಗೌಡ ಸೇರಿದಂತೆ ಕಾರ್ಯಕರ್ತರು ಮುಖಂಡರು ಹಾಜರಿದ್ದರು.