ಬಿಜೆಪಿ ಮಂಡಳ ಅಧ್ಯಕ್ಷರಾಗಿ ಸಂತೋಷ ಪಾಟೀಲ್ ಆಯ್ಕೆ

ಸಿಂದಗಿ :ಫೆ.20: ಪಕ್ಷನಿಷ್ಠೆ ಕಾರ್ಯವನ್ನು ಗುರುತಿಸಿ ಸಂತೋಷಗೌಡ ಪಾಟೀಲ್ (ಡಂಬಳ) ಅವರನ್ನು ಸಿಂದಗಿ ತಾಲೂಕು ಬಿಜೆಪಿ ಮಂಡಳದ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಜಿಲ್ಲಾ ಘಟಕದ ಅಧ್ಯಕ್ಷ ಆರ್ ಎಸ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.
ತಾಲೂಕ ಬಿಜೆಪಿ ಮಂಡಳ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಸಂತೋಷ ಪಾಟೀಲ್ ಮಾತನಾಡಿ ಪಕ್ಷದ ಹಿರಿಯರು ಮಾಜಿ ಶಾಸಕರು ಯುವಕರು ನನ್ನ ಮೇಲೆ ಬೆಟ್ಟದಷ್ಟು ಭರವಸೆ ಇಟ್ಟು ಅಧ್ಯಕ್ಷ ಸ್ಥಾನದ ಜವಾಬ್ದಾರಿ ಕೊಟ್ಟಿದ್ದಾರೆ ಆ ಸ್ಥಾನಕ್ಕೆ ಕಪ್ಪು ಚುಕ್ಕೆ ಬರದ ಹಾಗೆ ಜವಾಬ್ದಾರಿಯಿಂದ ಮುನ್ನಡೆಸಿಕೊಂಡು ಹೋಗುತ್ತೇನೆ ಎಂದು ತಿಳಿಸಿದ್ದಾರೆ.