
ಸಂಜೆವಾಣಿ ವಾರ್ತೆ
ಕುಕನೂರು, ಮಾ.06: ಬಿಜೆ ಪಿ ಪಕ್ಷ ಸಂಘಟನೆ ಬಗ್ಗೆ ಭಾನುವಾರ ಪಟ್ಟಣ ಸಲ್ಲಿ ಜರುಗಿತು.. ವಿಭಾಗಿಯ ಸಂಘಟನಾ ಸಹ ಪ್ರಭಾರಿ ಚಂದ್ರಶೇಖರ ಗೌಡ ಪಾಟೀಲ್ ಹಲಗೇರಿ, ಎಸ್.ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಸಣ್ಣ ಕನಕಪ್ಪ, ಮಂಡಲದ ಎಸ್.ಸಿ ಮೋರ್ಚಾ ಅಧ್ಯಕ್ಷ ಸಂಗಪ್ಪ ಜೋಗನ್ನವರ, ಎಸ್.ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ್, ಗಣೇಶ್, ಮಂಡಲದ ಪ್ರಧಾನ ಕಾರ್ಯದರ್ಶಿ ಮಾರುತಿ, ಶಿವಪ್ಪ… ಮೋರ್ಚಾ ಪದಾಧಿಕಾರಿಗಳು ಮತ್ತು ಪಕ್ಷದ ಹಿರಿಯರು ಭಾಗವಹಿಸಿದ್ದರು… ಕಾರ್ಯಕ್ರಮದ ಅಧ್ಯಕ್ಷ ವಿಶ್ವನಾಥ್ ಮರೀಬಸಪ್ಪನವರ ವಹಿಸಿ ಅಧ್ಯಕ್ಷ ನುಡಿಗಳನ್ನಾಡಿದರು, ಮಾನ್ಯ ಸಚಿವರ ಅಭಿವೃದ್ಧಿ ಕೆಲಸಗಳು ಬಗ್ಗೆ ಮತ್ತು ನಿರಾವರಿ ಅಭಿವೃದ್ಧಿ ಬಗ್ಗೆ ಮಾತನಾಡಿದರು, ಮತ್ತು ಈ ಕಾಂಗ್ರೆಸ್ ಸರಕಾರದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರಿಗೆ ಆದ್ ಅನ್ಯಾಯ ಬಗ್ಗೆ ಮಾತನಾಡಿದರು.. ಅಚ್ಚರಿಯ ಸಂಗತಿ ಏನೆಂದರೆ ಬಿಜೆಪಿ ಸಭೆಯಲ್ಲಿ ಕಾಂಗ್ರೆಸ್ ಪಟ್ಟಣ ಪಂಚಾಯತ್ ಸದಸ್ಯರೊಬ್ಬರು ಹಾಜರಾದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.