ಬಿಜೆಪಿ ಬೆಂಬಲಿಸಿದ್ದಕ್ಕೆ ದೇಶ ವಿರೋದಿಯ ಪಟ್ಟ: ತೆಲಂಗಾಣ ಸಿಎಂ

ಹೈದರಾಬಾದ್, ನ.8- ಬಿಜೆಪಿ ಪಕ್ಷವನ್ನು ಬೆಂಬಲಿದ ಹಿನ್ನೆಲೆಯಲ್ಲಿ ರಾಷ್ಟ್ರ ವಿರೋಧಿಯಾಗಿ ಬಿಜೆಪಿ ಪಕ್ಷ ಬಿಂಬಿಸಿದೆ ಎಂದು ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಹೇಳಿದ್ದಾರೆ.

ಬಿಜೆಪಿ ಪಕ್ಷವನ್ನು ಬೆಂಬಲಿಸದಿದ್ದಕ್ಕೆ ಈ ರೀತಿ ತಮ್ಮನ್ನು ಬಿಂಬಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಹೈದರಾಬಾದ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಸರ್ಕಾರವನ್ನು ವಿರೋಧಿಸುವರು ಅಥವಾ ಬಿಜೆಪಿಯನ್ನು ಬೆಂಬಲಿಸದಿದ್ದರೆ ಅವರನ್ನು ರಾಷ್ಟ್ರ ವಿರೋಧಿಯಾಗಿ ಬಿಜೆಪಿ ಬಿಂಬಿಸುವ ಕೆಲಸ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ನರೇಂದ್ರ ಮೋದಿ ಅವರು ಹೇಳಿದ್ದರು. ಅಧಿಕಾರಕ್ಕೆ ಬಂದು 7 ವರ್ಷ ಕಳೆದಿದ್ದರೂ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿಲ್ಲ ಎಂದು ದೂರಿದ್ದಾರೆ.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಚಿಸುವ ಸರ್ಕಾರ 1.35 ಲಕ್ಷ ಮತ್ತು ಮತ್ತೆ 70000 ಉದ್ಯೋಗ ಸೃಷ್ಟಿಗೆ ಮುಂದಾಗಿರುವುದನ್ನು ಬಿಟ್ಟರೆ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿಲ್ಲ ಎಂದು ಆರೋಪಿಸಿದ್ದಾರೆ.

ಬಿಜೆಪಿ ಪಕ್ಷವನ್ನು ನಾನು ಬೆಂಬಲಿಸಿದ್ದರೆ ದೇಶಪ್ರೇಮಿಯಾಗಿದ್ದೆ. ಬಿಜೆಪಿಯನ್ನು ವಿರೋಧಿಸಿದ್ದಕ್ಕೆ ದೇಶ ವಿರೋಧಿಯಾಗಿ ಗುರುತಿಸಲಾಗಿದೆ ಎಂದು ಅವರು ಹೇಳಿದರು