ಬಿಜೆಪಿ ಬೆಂಬಲಿಗನ ಕೋಟಿ ಸವಾಲು, ಕಾಂಗ್ರೆಸ್ ಬೆಂಬಲಿಗನ 3 ಲಕ್ಷ ಬಾಜಿ

ಚಾಮರಾಜನಗರ, ಮೇ.12:- ಚುನಾವಣಾ ಫಲಿತಾಂಶ ಬರಲುಒಂದು ದಿನವμÉ್ಟೀ ಬಾಕಿ ಇದ್ದು, ಜಿಲ್ಲೆಯ ಗುಂಡ್ಲುಪೇಟೆ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಗರು ನಗದು ಹಣವನ್ನು ಎದುರು ಇಟ್ಟುಕೊಂಡು ತಮ್ಮ ಪಕ್ಷದ ಅಭ್ಯರ್ಥಿಯೇ ಗೆಲುವು ಸಾಧಿಸಲಿದ್ದಾರೆ ಎಂದು ಬಹಿರಂಗವಾಗಿ ಸವಾಲು ಹಾಕಿದ್ದಾರೆ ಕಾಂಗ್ರೆಸ್ ಬೆಂಬಲಿಗರೊಬ್ಬರು ಮತ್ತು ಬಿಜೆಪಿ
ಬೆಂಬಲಿಗರೊಬ್ಬರು ಸವಾಲು ಹಾಕುತ್ತಿರುವ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಬಿಜೆಪಿ ಅಭ್ಯರ್ಥಿ ಸಿ.ಎಸ್.ನಿರಂಜನಕುಮಾರ್ ಅವರು ಗೆಲ್ಲುತ್ತಾರೆ ಎಂದು 71 ಕೋಟಿಗೂ ಹೆಚ್ಚು ಹಣ ಬಾಜಿಕಟ್ಟಲು ಸಿದ್ಧರಿದ್ದೇವೆ ಎಂದುಗುಂಡ್ಲುಪೇಟೆ ಪುರಸಭಾ ಸದಸ್ಯಕಿರಣ್‍ಗೌಡ, ಹಣದ ಕಟ್ಟುಗಳನ್ನು ಎದುರು ಇಟ್ಟುಕೊಂಡು ವಿಡಿಯೊದಲ್ಲಿ ಹೇಳಿದರೆ, ಕಾಂಗ್ರೆಸ್ ಬೆಂಬಲಿಗರೊಬ್ಬರು ಪ್ಲಾಸ್ಟಿಕ್ ಕವರ್‍ನಲ್ಲಿ ನಗದು ಹಣ ಇಟ್ಟುಕೊಂಡು, 3 ಲಕ್ಷ ಬಾಜಿಯ ಸವಾಲನ್ನು ವಿಡಿಯೊದಲ್ಲಿ ಹಾಕಿದ್ದಾರೆ.
ವಿಡಿಯೊಗಳಲ್ಲೇನಿದೆ?: ಬಿಜೆಪಿ ಪುರಸಭಾ ಸದಸ್ಯ ಕಿರಣ್‍ಗೌಡ, ‘ಗುಂಡ್ಲುಪೇಟೆ ಕ್ಷೇತ್ರದ ಸಿ.ಎಸ್.ನಿರಂಜನ ಕುಮಾರ್ ಅವರು ಅತಿ ಹೆಚ್ಚಿನ ಮತಗಳ ಅಂತರದಲ್ಲಿಗೆಲ್ಲಲಿದ್ದಾರೆ. ನಾವು 1 ಕೋಟಿಗೂ ಹೆಚ್ಚು ಬಾಜಿ ಕಟ್ಟುವುದಕ್ಕೆ ಸಿದ್ಧರಿದ್ದೇವೆ. ಕಾಫಿಡೇ ಹತ್ತಿರ ಸಂಜೆ 6 ಗಂಟೆವರೆಗೆ ಇರುತ್ತೇವೆ. ನಾವು 50 ಮಂದಿ ಕಾರ್ಯಕರ್ತರು ತಲಾ 2 ಲಕ್ಷದಂತೆ 71 ಕೋಟಿ ಸಿದ್ಧ ಮಾಡಿದ್ದೇವೆ. ಯಾವಾಗ ಬೇಕಾದರೂ ಕಟ್ಟುವುದಕ್ಕೆ ಸಿದ್ಧರಿದ್ದೇವೆ. ಕಾಂಗ್ರೆಸ್ ಮುಖಂಡರೇದಯ ಮಾಡಿ ಇದಕ್ಕೆ ನೀವು ಸ್ಪಂದಿಸಿ 11 ಕೋಟಿಕಟ್ಟಬೇಕಾಗಿ ವಿನಂತಿ’ ಎಂದು ಹೇಳುವ ದೃಶ್ಯ 27 ಸೆಕೆಂಡ್‍ಗಳ ತುಣುಕಿನಲ್ಲಿದೆ.
ಮತ್ತೊಂದು ವಿಡಿಯೊದಲ್ಲಿ ಗುಂಡ್ಲುಪೇಟೆಕ್ಷೇತ್ರ ವ್ಯಾಪ್ತಿಯ ಮಲ್ಲಯ್ಯನಪುರ ಗ್ರಾಮದ ಮುದ್ದರಾಮೇಮೇಗೌಡ ಎಂಬುವವರು, ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂದು ಕಾಂಗ್ರೆಸ್ ಮುಖಂಡರಿಗೆ 73 ಲಕ್ಷ ಹಣದ ಸವಾಲು ಹಾಕುವ ದೃಶ್ಯಇದೆ.
ಈ ಬಗ್ಗೆ ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಪದ್ಮನಿ ಸಾಹು, ಪ್ರತಿಕ್ರಿಯಿಸಿ ವಿಡಿಯೊಗಳು ಗಮನಕ್ಕೆ ಬಂದಿಲ್ಲ. ಈ ವಿಚಾರವನ್ನು ಪರಿಶೀಲಿಸಿ, ಕಾನೂನು ಪ್ರಕಾರಕ್ರಮ ಕೈಗೊಳ್ಳುತ್ತೇವೆ ಎಂದರು.