ಬಿಜೆಪಿ ಬೂತ್ ವಿಜಯ್ ಅಭಿಯಾನ

ಕಲಬುರಗಿ,ಜ.10: ವಿಧಾನಸಭಾ ಚುನಾವಣೆಗೆ ಮತಗಟ್ಟೆ ಹಂತದಲ್ಲಿ ಪಕ್ಷವನ್ನು ಸಜ್ಜುಗೊಳಿಸುವುದಕ್ಕಾಗಿ ಬಿಜೆಪಿಯು ಹಮ್ಮಿಕೊಂಡಿರುವ ಬೂತ್ ವಿಜಯ್ ಅಭಿಯಾನವು ಮಂಗಳವಾರ ಕಲಬುರಗಿ ಗ್ರಾಮೀಣ ಕ್ಷೇತ್ರದ ಕುಸನೂರ ಬಿಜೆಪಿ ಮಹಾಶಕ್ತಿ ಕೇಂದ್ರದ ಬೂತ್ 201 ರಿಂದ 210 ಬೂತ್ ಗಳಲ್ಲಿ ಕುಸನೂರ ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀಮತಿ ಸಂಗಮ್ಮ ಪಾಟೀಲ್ ಅವರ ನೇತೃತ್ವದಲ್ಲಿ ಕಮಲ ಧ್ವಜಾರೋಹಣ ಹಾರಿಸಿ ಚಾಲನೆ ನೀಡಲಾಯಿತು.
ನಂತರ ಬಿಜೆಪಿ ಕಾರ್ಯಕರ್ತರ ಮತ್ತು ಮುಖಂಡರ ಮನೆ ಮೇಲೆ ಧ್ವಜಾರೋಹಣ ಮಾಡಲಾಯಿತು.
ಕುಸನೂರ ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀಮತಿ ಸಂಗಮ್ಮ ಪಾಟೀಲ್ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಜ.2ರಿಂದ 12 ರವರೆಗೂ ಅಭಿಯಾನ ನಡೆಯಲಿದೆ ಮುಂದಿನ ಮೂರು ತಿಂಗಳಲ್ಲಿ ರಾಜ್ಯ ವಿಧಾನಸಭೆಯ ಚುನಾವಣಾಗಳು ಬರಲಿದ್ದು ಭೂತ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಮಗೆ ನಿಗದಿ ಪಡಿಸಿದ ಬೂತ್ ಗಳಲ್ಲಿ ಮನೆಮನೆಗೆ ತೆರಳಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಗಳನ್ನು ತಿಳಿಸುವ ಮೂಲಕ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದರು.
ಬೂತ್ ಗೆದ್ದರೆ ದೇಶ ಗೆದ್ದಂತೆ ಎನ್ನುವಂತೆ ಬೂತ್ ಮಟ್ಟದಲ್ಲಿ ಪಕ್ಷದ ಪರವಾಗಿ ಮತ ಚಲಾವಣೆಯಾಗುವಂತೆ ನೋಡಿಕೊಳ್ಳಬೇಕು ನಮ್ಮ ಪಕ್ಷದಲ್ಲಿ ಯಾರೇ ಅಭ್ಯರ್ಥಿಗಳಾಗಲಿ ನಮ್ಮಬೂತ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದರು.
ಈ ವಿಜಯ್ ಅಭಿಯಾನದಲ್ಲಿ ಗ್ರಾಮೀಣ ಮಂಡಲ ಕಾರ್ಯದರ್ಶಿಗಳಾದ ಜಗನ್ನಾಥ ಮಾಲಿ ಪಾಟೀಲ್, ಸದ್ಯಸರು ರಮೇಶ್ ತೆಗ್ಗಿನಮನಿ, ಶರಣಕುಮಾರ ಹಾಗರಗುಂಡಗಿ, ಶಿವು ಮಾಕುಂಡಿ ಅಂಬರಾಯ್ ಓಕಲಿ , ಬಿಜೆಪಿ ಮುಖಂಡರಾದ ವಿರೇಶ ಪಾಟೀಲ್, ರಾಜು ದೇವಾಕರ್ , ಅಶೋಕ ಬಬಲಾದ , ಸೇರಿದಂತೆ ಮುಖಂಡರಾದ ಗಣ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.