ಬಿಜೆಪಿ ಬಲವರ್ಧನೆಗಾಗಿ ಸೈನಿಕರಂತೆ ಸಾಗೋಣ: ಶಾಸಕ ಡಾ.ಅವಿನಾಶ ಜಾಧವ

ಕಾಳಗಿ:ಜ.14: ಸಶಕ್ತ ಭಾರತ ನಿರ್ಮಾಣಕ್ಕಾಗಿ ಪಣತೊಟ್ಟ ಪ್ರಧಾನಿ ನರೇಂದ್ರಮೋದಿಜೀ ಅವರ ಕನಸಿನ ಭಾರತದ ನಿರ್ಮಾಣಕ್ಕಾಗಿ ನಾವೇಲ್ಲರೂ ಒಗ್ಗಟ್ಟಾಗಿ ಸೇರಿಕೊಂಡು, ಬಿಜೆಪಿ ಪಕ್ಷದ ಬಲವರ್ಧನೆಗಾಗಿ ದೇಶದ ಗಡಿ ಕಾಯುವ ಸೈನಿಕರಂತೆ ಕೆಲಸ ಮಾಡೋಣ ಎಂದು ಶಾಸಕ ಡಾ.ಅವಿನಾಶ ಜಾಧವ ತಿಳಿಸಿದರು.

ಪಟ್ಟಣದ ವಾರ್ಡ್ ಸಂಖ್ಯೆ ನಾಲ್ಕರ ಸ್ಲಂ ಏರಿಯಾದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿರುವ ಬಿಜೆಪಿ ಪಕ್ಷದ ಬೂತ್ ವಿಜಯ ಅಭೀಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಹಿಂದೇಂದೂ ಆಗದಿರುವ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಸರ್ಕಾರದ ಅವಧಿಯಲ್ಲಾಗಿರುವುದು ದಾಖಲೆಯ ಸಂಗತಿ. ಅಭಿವೃದ್ಧಿಪರವಾಗಿರುವ ಬಿಜೆಪಿಯನ್ನು ಬೆಳೆಸಿದರೆ ದೇಶ ಬೆಳೆಯುತ್ತಿದೆ ಎಂದರ್ಥ. ಅಭಿವೃದ್ಧಿಗಾಗಿ, ದೇಶದ ಹಿತರಕ್ಷಣೆಗಾಗಿ, ದೇಶದ ಸಂಪತ್ತು ಸುಕ್ಷಿತವಾಗಿರುವುದಕ್ಕಾಗಿ, ಮಹಿಳೆಯರ ಅಧೀಕಾರದ ಹಕ್ಕಿಗಾಗಿ, ಬಡವರ ಏಳಿಗೆಗಾಗಿ, ನಮ್ಮ ನಾಡಿನ ಸುಕ್ಷತೆಗಾಗಿ ಬಿಜೆಪಿ ಮತ್ತಷ್ಠು ಭದ್ರಪಡಿಸುವುದು ಅನಿವಾರ್ಯವಿದೆ. ಕಾರಣ ನಾವೇಲ್ಲರೂ ಒಟ್ಟಾಗಿ ಸೇರಿಕೊಂಡು ಜಾತಿ, ಧರ್ಮ, ಮೇಲು-ಕೀಳು ಎನ್ನದೆ ದೇಶದ ಸರ್ವತೋಮುಖ ಬೆಳವಣಿಗೆಗಾಗಿ ದುಡಿಯೋಣ ಎಂದರು.

ಬಿಜೆಪಿ ಬೇರು ಮಟ್ಟದಿಂದ ಬಲಿಷ್ಠಗೊಳ್ಳಬೇಕಾದರೆ ಮೊದಲು ನಮ್ಮ ನಮ್ಮ ಬೂತ್‍ಗಳು ತುಂಬಾ ಬಲಗೊಳ್ಳಬೇಕಿದೆ. ಹೀಗಾಗಿ ನಮ್ಮ ಪಕ್ಷದ ವರಿಷ್ಠರು “ಮೇರಾ ಬೂತ್…ಮಜಬೂತ್…ಎಂಬ ವಾಕ್ಯವನ್ನು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಸಾಗುವುದು ಬಿಜೆಪಿ ಕಾರ್ಯಕರ್ತರ ಕರ್ತವ್ಯವಾಗಿದೆ ಎಂದರು.

ಪಟ್ಟಣದ ಮನೆ ಮನೆಗಳ ಮೇಲೆ ಬಿಜೆಪಿ ಧ್ವಜಗಳನ್ನು ಹಾರಿಸಿದರು. ಜೈ…ಘೋಷಗಳನ್ನಿಕ್ಕುತ್ತ, ತಮ್ಮ ಕಾರ್ಯಕರ್ತರ ಜೊತೆಗೂಡಿ ಸರ್ಕಾರದ ಯೋಜನೆಗಳ ಬಗ್ಗೆ ಜನತೆಗೆ ಮನವರಿಕೆ ಮಾಡಿಕೊಟ್ಟರು. ಬಿಜೆಪಿ ಹಿರಿಯ ಮುಖಂಡರು, ಪದಾಧೀಕಾರಿಗಳು, ಜನಪ್ರತಿನಿಧಿಗಳು ಶಾಸಕರಿಗೆ ಸಾಥ್ ನೀಡಿದರು. ಪಕ್ಷದ ಹಿರಿಯ ಮುಖಂಡ ಜೈಶಂಕರ ಮಾಲಿಪಾಟೀಲ, ಕಾಳಗಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಶಾಂತ ಕದಂ, ಚಿಂಚೋಳಿ ಮಂಡಲ ವಿಸ್ತಾರಕ ಅರವಿಂದ ತೊಣಪೆ, ವೀರಶೈವ ಲಿಂಗಾಯತ ಹಿರಿಯ ಮುಖಂಡ ಸೋಮಶೇಖರ್ ಮಾಕಪನೋರ, ಸಂತೋಷ ಪಾಟೀಲ ಮಂಗಲಗಿ, ವಿದ್ಯಾಸಾಗರ ಹಣಕುಣಿ, ವೀರಣ್ಣಗೌಡ ತೇಂಗಳಿ, ರಾಜೇಂದ್ರಬಾಬು ಹೀರಾಪೂರಕರ್, ಶರಣು ಚಂದಾ ಕೋಡದೂರ, ಜಗದೀಶ ಪಾಟೀಲ, ಬಲರಾಮ ವಲ್ಲಾ??ಪುರ, ರಮೇಶ ಕಿಟ್ಟದ, ಯಲ್ಲಾಲಿಂಗ ಕೋರಬಾ, ಗುಂಡಪ್ಪ ಚಿತ್ತಾಪೂರ, ಸುನೀಲ ರಾಜಾಪೂರ, ಲಿಂಗೂ ಜಾಧವ, ಕೃಷ್ಣಾ ರಾಠೋಡ, ಸುನೀಲ ರಾಜಾಪೂರ, ರತ್ನಮ್ಮ ಡೊಣ್ಣೂರ, ಮಂಜುನಾಥ ಹೆಬ್ಬಾಳ, ಸಂತೋಷ ಜಾಧವ, ಇಸುಗೌಡ ಮಳಗಿ, ದೇವೇಧ್ರ ಕದಂ, ಕಾಳಪ್ಪ ಕೋಯಿ, ಶರಣು ಪಾಟೀಲ, ರಾಚಯ್ಯಸ್ವಾಮಿ, ರಾಜು ಸಿಳ್ಳಿನ ಸೇರಿದಂತೆ ಅನೇಕರಿದ್ದರು.