ಬಿಜೆಪಿ ಬಗ್ಗೆ ಮಾಡಿದ ಆಪಾದನೆ ಸುಳ್ಳು :ರೇವಣಸಿದ್ಧ ಬಡಾ

ಚಿಂಚೋಳಿ ಏ 26: ಕಲಬುರಗಿ ಭಾರತೀಯ ಜನತಾ ಪಾರ್ಟಿ ಗ್ರಾಮೀಣ ಯುವ ಮೊರ್ಚಾ ಕಾರ್ಯದರ್ಶಿ ರೇವಣಸಿದ್ಧ ಬಡಾಅವರು ಕಾಂಗ್ರೆಸ್ ಮುಖಂಡ ಶರಣು ಮೋತಕಪಲ್ಲಿ ಬಿಜೆಪಿ ಪಕ್ಷದ ಬಗ್ಗೆ ಮಾಡಿದ ಆಪಾದನೆ ಸುಳ್ಳು ಎಂದು ತಿರುಗೇಟು ನೀಡಿದ್ದಾರೆ.
ಚಿಂಚೋಳಿ ತಾಲ್ಲೂಕು ಕಾಂಗ್ರೇಸ್ ಪಕ್ಷದ ಭದ್ರ ಕೋಟೆ ಎಂಬ ಹೆಗ್ಗಳಿಕೆಯ ಕ್ಷೇತ್ರವು ಆಗಿತ್ತು ಆದರೆ ಚಿಂಚೋಳಿ ತಾಲೂಕಿನಲ್ಲಿ ಪ್ರಥಮ ಬಾರಿಗೆ ಕಮಲವನ್ನು ಅರಳಿಸಿದ ಕೀರ್ತಿ ಮಾಜಿ ಸಚಿವರು ಹಾಗೂ ವಿಧಾನಪರಿಷತ ಸದಸ್ಯ ಸುನೀಲ್ ವಲ್ಲ್ಯಾಪುರೆ,ಮತ್ತು ಶಾಸಕ ಅವಿನಾಶ ಜಾಧವ್ ಹಾಗೂ ಸಂಸದ ಡಾ.ಉಮೇಶ ಜಾಧವ ಅವರಿಗೆ ಸಲ್ಲುತ್ತದೆ. ಚಿಂಚೋಳಿ ಮೀಸಲು ಕ್ಷೇತ್ರ ವಾಗುವುದಕ್ಕಿಂತ ಪುರ್ವದಲ್ಲಿ ಈ ಕ್ಷೇತ್ರ ಆಳಿದ್ದು ಲಿಂಗಾಯತರು ಎನ್ನುವುದನ್ನು ಶರಣು ಮೋತಕಪಲ್ಲಿ ಮರೆಯಬಾರದು. ಎಂದು ಅವರು ತಿರುಗೇಟು ನೀಡಿದರು. ಜಾಧವ ಕುಟುಂಬದವರು ಯಾವಾಗಲೂ ಲಿಂಗಾಯತರಿಗೆ ಅವಕಾಶ ಕಲ್ಪಿಸುತ್ತಾ ಬಂದಿದ್ದಾರೆ. ಹಾಗೆ ನೋಡಿದರೆ ಬಹು ದೊಡ್ಡ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷದಿಂದ ಲಿಂಗಾಯತರಾದ ಸಂತೋಷ ಗಡಂತಿ ಬಿಜೆಪಿ ಪಕ್ಷದ ತಾಲೂಕ ಅಧ್ಯಕ್ಷರಾಗಿದ್ದಾರೆ, ಮತ್ತು ಸಂತೋಷ ಗಡಂತಿ ಅವರ ತಾಯಿ ಜಗದೇವಿ ಗಡಂತಿ. ಅವರು ಚಿಂಚೋಳಿಯ ಪುರಸಭೆ ಅಧ್ಯಕ್ಷರಾಗಿದ್ದಾರೆ, ಮಲ್ಲು ಕೋಲಕುಂದಿ ಕಾಡಾದ ನಿರ್ದೇಶಕರಾಗಿದ್ದಾರೆ, ಅಜೀತ್ ಪಾಟೀಲ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ, ಶೇಖರ್ ಪಾಟೀಲ ತಾಲ್ಲೂಕ ಪ್ರಧಾನ ಕಾರ್ಯದರ್ಶಿ, ಅಶೋಕ್ ಪಡಶೆಟ್ಟಿ ಕೃಷಿ ಮಾರುಕಟ್ಟಿ ನಿರ್ದೇಶಕರು. ರಮೇಶ್ ಧುತ್ತರಗಿ ರೈತ ಮೂರ್ಚಾ ಅಧ್ಯಕ್ಷ, ವೀರು ಪಾಟೀಲ ರೈಯಕೊಡ ಜಿಲ್ಲಾ ಯುವ ಮೊರ್ಚಾ ಪ್ರಧಾನ ಕಾರ್ಯದರ್ಶಿ ಹೀಗೆ ಅನೇಕ ಹುದ್ದೆಗಳಲ್ಲಿ ಅವಕಾಶ ಪಡೆದಿರುತ್ತಾರೆ. ಮುಂಬರುವ ಜಿಲ್ಲಾ ಮತ್ತು ತಾಲ್ಲೂಕ ಪಂಚಾಯತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಲಿಂಗಾಯತರು ಮೇಲುಗೈ ಸಾಧಿಸುತ್ತಾರೆ.
ಆದ್ದರಿಂದ ಸುಳ್ಳು ಆಪಾದನೆಯನ್ನು ಮಾಡಿರುವ ಕಾಂಗ್ರೇಸ ಪಕ್ಷದ ಶರಣು ಮೋತಕಪಲ್ಲಿ ಬಿ.ಜೆ.ಪಿಗೆ ಮಾಡಿರುವ ಆಪಾದನೆಯನ್ನು ಕೂಡಲೆ ಹಿಂಪಡೆಯಬೇಕು ಎಂದು ಭಾರತೀಯ ಜನತಾ ಪಾರ್ಟಿ ಕಲಬುರಗಿ ಗ್ರಾಮಿಣದ ಯುವ ಮೊರ್ಚಾ ಕಾರ್ಯದರ್ಶಿ ರೇವಣಸಿದ್ಧ ಬಡಾ ಆಗ್ರಹಿಸಿದ್ದಾರೆ.